12:59 PM Wednesday 22 - October 2025

ಮಾಜಿ ಸಚಿವ ಎನ್.ಮಹೇಶ್ ಬೆಂಬಲಿಗನ ಮೇಲೆ ಹಲ್ಲೆ | ದೂರು ದಾಖಲು

04/12/2020

ಕೊಳ್ಳೇಗಾಲ: ಮಾಜಿ ಸಚಿವ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರ ಬೆಂಬಲಿಗನ ಮೇಲೆ ಹಲ್ಲೆ ನಡೆದಿದ್ದು, ಈ ಸಂಬಂಧ ಹಲವರ ವಿರುದ್ಧ ದೂರು ದಾಖಲಾಗಿದೆ.

ಮಾಂಬಳ್ಳಿ ಗ್ರಾಮದ ಮಲ್ಲಿಕಾರ್ಜುನ ಹಲ್ಲೆಗೊಳಗಾದವರಾಗಿದ್ದಾರೆ.  ಬಟ್ಟೆ ಖರೀದಿಸಲು ತೆರಳುತ್ತಿದ್ದ ಸಂದರ್ಭದಲ್ಲಿ ಇವರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.




ಇನಾಯತ್ ಬೇಗ್, ಚೈನಾರಾಮ್ ಕಾಪ್ಡಿ, ರಂಗಸ್ವಾಮಿ, ಹನುಮಂತು ಎಂಬವರು ತನ್ನ ಮೇಲೆ ಹಲ್ಲೆ ನಡೆಸಿದ್ದು, “ನಿಮ್ಮ ಅಣ್ಣ(ಎನ್.ಮಹೇಶ್)ನಿಗೆ ಸರಿಯಾಗಿ ಮಂಗಳಾರತಿ ಎತ್ತಿದ್ದೇವೆ” ಎಂದು ಹೇಳಿದ್ದಲ್ಲದೇ ಜಾತಿ ನಿಂದನೆ ಮಾಡಿದ್ದಾರೆ ಎಂದು ಮಲ್ಲಿಕಾರ್ಜುನ ದೂರಿನಲ್ಲಿ ತಿಳಿಸಿದ್ದಾರೆ.

ಜ್ಯುವೆಲ್ಲರಿ ಬಳಿಯಲ್ಲಿ ಎನ್.ಮಹೇಶ್ ಅವರ ಬೆಂಬಲಿಗ  ಮಲ್ಲಿಕಾರ್ಜುನ್ ಅವರನ್ನು ಅಡ್ಡಗಟ್ಟಿ ಕುತ್ತಿಗೆಪಟ್ಟಿ ಹಿಡಿದು, ಎದೆಗೆ, ಹೊಟ್ಟೆಗೆ ಕುತ್ತಿಗೆಗೆ ಬಲವಾಗಿ ಗುದ್ದಿ ಗಾಯಗೊಳಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇತ್ತೀಚಿನ ಸುದ್ದಿ

Exit mobile version