ನಾಡ ಗೀತೆ ದೊಡ್ಡದಾಗಿದೆ, ಕಟ್ ಮಾಡ್ತೀವಿ ಎಂದ ಸಚಿವ ಅರವಿಂದ್ ಲಿಂಬಾವಳಿ

15/03/2021

ಗದಗ: ನಾಡಗೀತೆ ಬಹಳ ದೊಡ್ಡದಾಗಿದೆ ಹಾಗಾಗಿ ನಾಡಗೀತೆಗೆ ಕತ್ತರಿ ಹಾಕಲು ಚಿಂತನೆ ನಡೆಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಅರಣ್ಯ ಇಲಾಖೆ ಸಚಿವ ಅರವಿಂದ್ ಲಿಂಬಾವಳಿ ಹೇಳಿದ್ದಾರೆ.

ಜಿಲ್ಲೆಯ ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನ ಕಪ್ಪತ್ತಗುಡ್ಡ ಹಾಗೂ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ ಅವರು, ಈ ವಿಚಾರ ತಿಳಿಸಿದ್ದು,  ನಾಡಗೀತೆಗೆ ಕತ್ತರಿ ಹಾಕುವ ಬಗ್ಗೆ ಸಾಹಿತಿಗಳು ಹಾಗೂ ತಜ್ಞರ ಸಭೆ ಕರೆದು ಶೀಘ್ರವೇ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.

ನಾಡಗೀತೆ ದೊಡ್ಡದಾಗಿರುವುದರಿಂದ ಹಿರಿಯ ವಯಸ್ಕರು ನಿಂತುಕೊಳ್ಳಲು ಕಷ್ಟವಾಗುತ್ತಿದೆ. ಈ ಹಿಂದೆಯೂ ನಾಡಗೀತೆ ಕಡಿತದ ಬಗ್ಗೆ  ಸಾಕಷ್ಟು ಚರ್ಚೆಗಳಾಗಿವೆ. ಕಡಿಮೆ ಅವಧಿಯಲ್ಲಿ ನಾಡಗೀತೆ ಹಾಡಲು ಚಿಂತನೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ

Exit mobile version