11:39 PM Saturday 18 - October 2025

ಕರ್ಫ್ಯೂ ನಡುವೆ ನಡು ರಾತ್ರಿ ರಸ್ತೆಯಲ್ಲಿ ಡಾನ್ಸ್ ಮಾಡಿದ ಯುವತಿಯ ಮೇಲೆ ಕೇಸು ದಾಖಲು!

prisha rathod
17/04/2021

ರಾಜ್ ಕೋಟ್:  ಕೊರೊನಾ ನಡುವೆ ನಡು ರಸ್ತೆಯಲ್ಲಿ ಡಾನ್ಸ್ ಮಾಡಿದ ಯುವತಿಯ ಮೇಲೆ ಇದೀಗ ಪೊಲೀಸರು ಕೇಸು ದಾಖಲಿಸಿದ್ದು, ಕೊರೊನಾ ಮಾರ್ಗದರ್ಶಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ನಗರ ಪೊಲೀಸರು ಯುವತಿಯ ವಿರುದ್ಧ ದೂರು ನೀಡಿದ್ದಾರೆ.

ನಿಷೇಧಾಜ್ಞೆ ಜಾರಿಯಲ್ಲಿರುವ ನಡುವೆಯೇ 25 ವರ್ಷ ವಯಸ್ಸಿನ ಯುವತಿ ಪ್ರಿಶಾ ರಾಥೋಡ್ ಏಪ್ರಿಲ್ 12ರ ರಾತ್ರಿ 12 ಗಂಟೆಗೆ ಮಹಿಳಾ ಕಾಲೇಜಿನ ಅಂಡರ್ ಪಾಸ್ ನ ಸಮೀಪದಲ್ಲಿ  ವಿಡಿಯೋ ಚಿತ್ರೀಕರಿಸಿ ತನ್ನ ಅಪಾರ ಫಾಲೋರ್ಸ್ ಇರುವ  ಇನ್ಟಾಗ್ರಾಮ್ ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾಳೆ.

ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆಯೇ ಯುವತಿಯ ಡಾನ್ಸ್ ವ್ಯಾಪಕ ವೈರಲ್ ಆಗಿದ್ದು, ಪೊಲೀಸರ ಗಮನಕ್ಕೂ ಬಂದಿದೆ.  ಪೊಲೀಸರು ಯುವತಿಯ ಸಾಮಾಜಿಕ ಜಾಲತಾಣ ಖಾತೆಗಳನ್ನು ಗಮನಿಸಿದಾಗ ಇನ್ನಷ್ಟು ವಿಡಿಯೋಗಳು ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಯುವತಿಯ ಮೇಲೆ ದೂರು ದಾಖಲಿಸಲಾಗಿದೆ.

ಇನ್ನೂ ದೂರು ದಾಖಲಾಗುತ್ತಿದ್ದಂತೆಯೇ ಯುವತಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಈ ಬಗ್ಗೆ ಇನ್ನೊಂದು ವಿಡಿಯೋ ಮಾಡಿ ಕ್ಷಮೆ ಕೇಳಿದ್ದಾಳೆ. ಅಲ್ಲದೇ ಈ ವಿಡಿಯೋಗಳನ್ನು ಶೇರ್ ಮಾಡದಂತೆಯೇ ತನ್ನ ಫಾಲೋವರ್ಸ್ ಗೆ ಮನವಿ ಮಾಡಿದ್ದಾಳೆ. ತಾನು ವಿಡಿಯೋ ಡಿಲೀಟ್ ಮಾಡಿದ್ದರೂ, ಕೆಲವರು ವಿಡಿಯೋವನ್ನು ಮತ್ತೆ ಮತ್ತೆ ಶೇರ್ ಮಾಡುತ್ತಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.

ಇತ್ತೀಚಿನ ಸುದ್ದಿ

Exit mobile version