ನಫೆ ಸಿಂಗ್ ರಾಠಿ ಕೊಲೆ ಪ್ರಕರಣ: ಗೋವಾದಲ್ಲಿ ಇಬ್ಬರು ಶೂಟರ್ ಬಂಧನ

ಪ್ರಮುಖ ಬೆಳವಣಿಗೆಯೊಂದರಲ್ಲಿ ಹರಿಯಾಣ ಐಎನ್ಎಲ್ ಡಿ ಮುಖ್ಯಸ್ಥ ನಫೆ ಸಿಂಗ್ ರಾಠಿ ಅವರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು, ದೆಹಲಿ ಪೊಲೀಸ್ ವಿಶೇಷ ಸೆಲ್ ಮತ್ತು ಹರಿಯಾಣ ಎಸ್ಟಿಎಫ್ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಶೂಟರ್ ಗಳನ್ನು ಗೋವಾದಲ್ಲಿ ಬಂಧಿಸಿದ್ದಾರೆ. ಇಬ್ಬರು ಶೂಟರ್ ಗಳನ್ನು ಸೌರವ್ ಮತ್ತು ಆಶಿಶ್ ಎಂದು ಗುರುತಿಸಲಾಗಿದೆ.
ಇನ್ನೂ ಇಬ್ಬರು ಶೂಟರ್ ಗಳನ್ನು ಹಿಡಿಯಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಝಜ್ಜರ್ ಪೊಲೀಸರು ತಿಳಿಸಿದ್ದಾರೆ. ಇಬ್ಬರು ಶೂಟರ್ ಗಳು ಕಪಿಲ್ ಸಾಂಗ್ವಾನ್ ಗ್ಯಾಂಗ್ ನೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಶಂಕಿಸಲಾಗಿದೆ. ಐಎನ್ಎಲ್ಡಿ ನಾಯಕ ನಫೆ ಸಿಂಗ್ ರಾಠಿ ಮತ್ತು ಪಕ್ಷದ ಕಾರ್ಯಕರ್ತ ಜೈ ಕಿಶನ್ ಅವರನ್ನು ಫೆಬ್ರವರಿ 24 ರಂದು ಬಹದ್ದೂರ್ ಗಢದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.
ಎಫ್ಐಆರ್ ನಲ್ಲಿ ಮಾಜಿ ಶಾಸಕ ನರೇಶ್ ಕೌಶಿಕ್, ಕರಂಬೀರ್ ರಾಠಿ, ರಮೇಶ್ ರಾಠಿ, ಸತೀಶ್ ರಾಠಿ, ಗೌರವ್ ರಾಠಿ, ರಾಹುಲ್ ಮತ್ತು ಕಮಲ್ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಇತರ ಐವರು ಅನಾಮಧೇಯ ಆರೋಪಿಗಳಲ್ಲಿ ಸೇರಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth