2:53 AM Thursday 16 - October 2025

ನನ್ನ ಬರ್ಥ್ ಡೇಗೆ ಉಡುಗೊರೆ ಬೇಡ ರಕ್ತದಾನ ಮಾಡಿ ಎಂದು ಕೇಳಿದ 6ರ ಬಾಲಕಿ!

birthday
12/04/2021

ಮುಂಬೈ: 6 ವರ್ಷ ವಯಸ್ಸಿನ ಮಗು, ಹುಟ್ಟು ಹಬ್ಬದ ದಿನ ನನಗೆ ಉಡುಗೊರೆ ಬೇಡ, ಕುಟುಂಬಸ್ಥರೆಲ್ಲರೂ ರಕ್ತದಾನ ಮಾಡುವ ಮೂಲಕ ತನ್ನ ಹುಟ್ಟು ಹಬ್ಬ ಆಚರಿಸಬೇಕು ಎಂದು ಬೇಡಿಕೆ ಇಡುವ ಮೂಲಕ ಸುದ್ದಿಯ ಕೇಂದ್ರ ಬಿಂದುವಾಗಿದ್ದಾಳೆ.

ಮಹಾರಾಷ್ಟ್ರದ ಪಾಲಗಢ ಜಿಲ್ಲೆಯ ವಾಡಾ ತಾಲೂಕಿನ ಗಂಡ್ರೆ ಗ್ರಾಮ ನಿವಾಸಿಯಾಗಿರುವ ಯುಗ ಅಮೋಲ್ ಠಾಕ್ರೆ ಎಂಬ ಬಾಲಕಿಯ ಹುಟ್ಟುಹಬ್ಬ ಶನಿವಾರದಂದು ನಡೆದಿದೆ. ಈ ದಿನ ಬಾಲಕಿ ಮಾಧ್ಯಮವೊಂದರಲ್ಲಿ ತನ್ನ ಬರ್ಥ್ ಡೇ ಗೆ ಉಡುಗೊರೆ ಬೇಡ ರಕ್ತದಾನ ಮಾಡಿ ಎಂದು ಮನವಿ ಮಾಡಿದ್ದಾಳೆ.

ಬಾಲಕಿಯ ಮನವಿಗೆ ಸ್ಪಂದಿಸಿರುವ ಕುಟುಂಬದ ಸದಸ್ಯರು, ಸಂಬಂಧಿಗಳು ಸ್ನೇಹಿತರು ಸೇರಿದಂತೆ ಒಟ್ಟು 36 ಮಂದಿ ಶನಿವಾರ ಕಲ್ಯಾಣಿ ಆಸ್ಪತ್ರೆಯಲ್ಲಿ ರಕ್ತದಾನ ಮಾಡುವ ಮೂಲಕ ಬಾಲಕಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.

ಇನ್ನೂ ಬಾಲಕಿಯ ಈ ವಿಶಿಷ್ಟ ಬರ್ಥ್ ಡೇ ಬಗ್ಗೆ ಮಾತನಾಡಿದ ಆಸ್ಪತ್ರೆ ವೈದ್ಯರಾದ ಡಾ.ವೈಭವ್, ಇದು ಉತ್ತಮ ಆಲೋಚನೆಯಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಮಗುವಿನ ಸಮಾಜಮುಖಿ ಕಾಳಜಿಯ ಬಗ್ಗೆ ಹೆಮ್ಮೆಯಾಯಿತು ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version