ಪ್ರವಾಹದಲ್ಲಿ ನೀರು ಹರಿದಂತೆ ವರ್ಷಗಳು ಹರಿದು ಹೋಗ್ತಾ ಇದೆ: ಡಾ.ಡಿ.ವೀರೇಂದ್ರ ಹೆಗ್ಡೆ
2022 ಇಸವಿ ಕೊನೆಗೊಂಡಿದೆ. ಪ್ರವಾಹದಲ್ಲಿ ನೀರು ಹರಿದಂತೆ ವರ್ಷದಲ್ಲಿ ಕೂಡ ವರ್ಷ ಹರಿದು ಹೋಗ್ತಾ ಇದೆ. ಶತಮಾನಗಳ ಇತಿಹಾಸವನ್ನು ನಾವು ನೋಡಿದರೆ ಪ್ರತಿಯೊಂದು ದಿವಸವು ಹೊಸ ಹುಟ್ಟು ಪಡೆಯುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಡೆ ಹೇಳಿದ್ದಾರೆ.
ಹೊಸ ವರ್ಷದ ಕುರಿತಂತೆ ಸಂದೇಶ ನೀಡಿರುವ ಅವರು, ಈ ವರ್ಷದಲ್ಲಿ ನಾವು ಹೊಸದನ್ನ ನಿರೀಕ್ಷೆ ಮಾಡ್ತೀವಿ. ಕಳೆದ ವರ್ಷ ನಾವು ಮಿಶ್ರ ಪ್ರತಿಕ್ರಿಯೆಯನ್ನು ನೋಡಿದೆವು. ಮಳೆ ಬರುವಂತಹ ಕಾಲದಲ್ಲಿ ಅತಿವೃಷ್ಟಿಯನ್ನು ನೋಡಿದೆವು. ಅನೇಕ ಕಡೆ ಕೃಷಿಗೆ ಹಾನಿಯಾಯಿತು. 2023 ಸಮತೋಲನ ವರ್ಷ ಆಗಲಿ. ಈ ವರ್ಷ ಸುಖ ದುಃಖವನ್ನು ಹೊಂದಿಸಿಕೊಂಡು ಹೋಗುವಂತೆ ಆಗಲಿ ಎಂದು ಅವರು ಹಾರೈಸಿದರು.
ಈ ಸಲದ ಮಕರ ಸಂಕ್ರಮಣದ ಬಳಿಕ ದುಃಖವೆಲ್ಲಾ ನಿವಾರಣೆ ಆಗಿ ಸುಖ ಶಾಂತಿ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ. ನಮ್ಮ ದೇಶ ಈಗ ಬೆಳೆದಿದೆ. ನಮ್ಮ ದೇಶ ಇತರ ದೇಶಗಳಿಗೆ ಹಿರಿಯಣ್ಣನಂತೆ ಬೆಳೆದಿದೆ. ಈ ಸ್ಥಾನದಲ್ಲಿ ನಾವು ಇನ್ನಷ್ಟು ಏರುತ್ತಾ ಹೋಗಬೇಕು. ಈ ವರ್ಷದಲ್ಲಿ ನಮ್ಮ ದೇಶ, ನಮ್ಮ ರಾಜ್ಯ, ನಮ್ಮ ಸಂಸಾರ ವೃದ್ಧಿಯಾಗಲಿ. ಎಲ್ಲಾ ಚೆನ್ನಾಗಿ ಬೆಳವಣಿಗೆ ಆಗಲಿ ಎಂದು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಡೆ ಶುಭ ಹಾರೈಕೆ ಮಾಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw


























