ರಸ್ತೆ ದುರಸ್ಥಿ ಮಾಡದೆ ನಿರ್ಲಕ್ಷ್ಯ: ಅಣಕು ಶವ ದಹಿಸಿ ಡಿವೈಎಫ್ ಐ ನಿಂದ ವಿಭಿನ್ನ ಪ್ರತಿಭಟನೆ

ಮಂಗಳೂರು: ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮುಖ್ಯ ರಸ್ತೆಗಳ ಗುಂಡಿ ಮುಚ್ಚಿ ಸಂಚಾರ ಯೋಗ್ಯ ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ಮತ್ತು ಕೈಗಾರಿಕಾ ಪ್ರದೇಶದಿಂದ ರಾಷ್ಟೀಯ ಹೆದ್ದಾರಿ ಸಂಪರ್ಕ ಮಾಡುವ ಮುಖ್ಯ ರಸ್ತೆಯ ಅಭಿವೃದ್ಧಿ ಕಡೆಗಣಿಸಿ ನಿರ್ಲಕ್ಷ್ಯ ಮಾಡುತ್ತಿರುವ ಕೆಐಎಡಿಬಿ ಅಧಿಕಾರಿಗಳು ಮತ್ತು ಜನಪ್ರತಿನಿದಿನಗಳ ಬೇಜವಾಬ್ದಾರಿತನವನ್ನು ಖಂಡಿಸಿ ಡಿವೈಎಫ್ ಐ ಬೈಕಂಪಾಡಿ ಘಟಕದ ನೇತೃತ್ವದಲ್ಲಿ ಸೋಮವಾರ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಕೆಐಎಡಿಬಿ ಕಚೇರಿ ಎದುರು ಅಣಕು ಶವ ದಹಿಸಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಯಿತು.
ಡಿವೈಎಫ್ ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಅವರು ಪ್ರತಿಭಟನೆ ಉದ್ದೇಶಿಸಿ ಮಾತನಾಡುತ್ತಾ, ಕೈಗಾರಿಕಾ ಪ್ರದೇಶದ ಯಾವ ರಸ್ತೆಯೂ ಗುಂಡಿಗಳಿಂದ ಹೊರತಾಗಿಲ್ಲ ರಸ್ತೆ ಗುಂಡಿಯಿಂದಾಗಿ ಪ್ರತಿನಿತ್ಯ ಅಪಘಾತಗಳು ಸಾವು ನೋವು ಸಂಭವಿಸುತ್ತಿದೆ. ವಾಹನಗಳು ಉರುಳಾಡಿಕೊಂಡು ಸಂಚ,ರಿಸುತ್ತಿದೆ ಪಾದಚಾರಿಗಳಿಗೂ ನಡೆದಾಡಲು ಸಾಧ್ಯವಾಗುತ್ತಿಲ್ಲ. ಜನಪ್ರತಿನಿದಿನಗಳು ಕಣ್ಣಿದ್ದು ಕುರುಡರಂತಾಗಿದ್ದಾರೆ ಕೆಐಎಡಿಬಿ ಇಲಾಖೆ ಗೊಡವೆ ಇಲ್ಲದೆ ನಿರ್ಜೀವ ಸ್ಥಿತಿಯಲ್ಲಿದೆ ಎಂದರು ರಸ್ತೆ ದುರಸ್ಥಿ ಆಗದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಡಿವೈಎಫ್ ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ನಗರ ಕಾರ್ಯದರ್ಶಿ ತಯ್ಯುಬ್ ಬೆಂಗ್ರೆ, ಜಿಲ್ಲಾ ಮುಖಂಡರಾದ ನೌಶಾದ್ ಬೆಂಗ್ರೆ, ಶ್ರೀನಾಥ್ ಕುಲಾಲ್, ಆಜ್ಮಲ್ ಕಾನ, ಹನೀಫ್ ಬೆಂಗ್ರೆ, ಬೈಕಂಪಾಡಿ ಘಟಕ ಅಧ್ಯಕ್ಷರಾದ ತೌಸೀಫ್ ಅಂಗರಗುಂಡಿ, ಮುಖಂಡರಾದ ಸೈಫಲ್, ಶಕೀಲ್, ನಿಜಾಮ್, ಮುಸ್ತಫಾ,ರಾಝಿಕ್, ಅಶ್ಫಾನ್, ಇಷಾತ್, ನಝರ್ ಬೈಕಂಪಾಡಿ, ನೌಫಾನ್, ತೌಷೀಫ್, ಅನ್ಸಾರ್, ಫಾಹಿಜ್, ಸಾಜೀದ್, ಸಲೀಂ, ಬಸ್ ಮಾಲಕರ ಸಂಘದ ಇಚ್ಛಾಲಿ ಎಸ್. ಎಂ, ಸಲೀಮ್ ಸಾಮಾಜಿಕ ಮುಂದಾಳುಗಳಾದ ಮೊಹಮ್ಮದ್ ಬಾವ, ಅಬ್ದುಲ್ ಖಾದರ್, ವಾಹೀದ್,ರಿಕ್ಷಾ ಚಾಲಕರ ಸಂಘದ ಮುಖಂಡರಾದ ಶಾಫಿ, ಮುಸ್ತಫಾ ಎಸ್.ಎಂ, ಲತೀಫ್ ಅಂಗರಗುಂಡಿ ಮುಂತಾದವರು ಉಪಸ್ಥಿತರಿದ್ದರು.
ಪ್ರತಿಭಟನೆಗೂ ಮುನ್ನ ಅಂಗರಗುಂಡಿ ಬಸ್ ನಿಲ್ದಾಣದ ಬಳಿಯಿಂದ ಕೆ.ಐ.ಎ.ಡಿ.ಬಿ. ಕಚೇರಿವರೆಗೆ ಮೆರವಣಿಗೆ ನಡೆಯಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD