12:25 PM Tuesday 21 - October 2025

ನೆಕ್ಕಿಲಾಡಿಯಲ್ಲಿ ಆ್ಯಕ್ಟೀವಾಗೆ ಪಿಕ್ ಅಪ್ ಜೀಪು ಡಿಕ್ಕಿ

21/11/2020

ಪುತ್ತೂರು: ಪುತ್ತೂರು-ಉಪ್ಪಿನಂಗಡಿ ರಸ್ತೆಯ ನೆಕ್ಕಿಲಾಡಿಯಲ್ಲಿ ಮರಳು ಸಾಗಾಟದ ಪಿಕ್ ಅಪ್ ಜೀಪು ಡಿಕ್ಕಿ ಹೊಡೆದ ಪರಿಣಾಮ ಆ್ಯಕ್ಟೀವಾ ಸವಾರ ಗಾಯಗೊಂಡ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ಯು.ಜಿ.ರಾಧಾರವರು ಗಾಯಗೊಂದಿದ್ದರೆ.

ಉಪ್ಪಿನಂಗಡಿ ನಟ್ಟಿಬೈಲು ವೇದಶಂಕರ ನಗರದಲ್ಲಿರುವ ಶ್ರೀರಾಮ ಶಾಲೆಯ ಸಂಚಾಲಕರೂ ಆಗಿರುವ ಉಪ್ಪಿನಂಗಡಿ ಕೈಲಾರ್ ಮೆಡಿಕಲ್ ಮಾಲಕ ಯು.ಜಿ.ರಾಧಾರವರು ಶಾಲೆಯ ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿ ಶಾಸಕರ ಜತೆ ಮಾತನಾಡಲು ಉಪ್ಪಿನಂಗಡಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಯು.ಜಿ.ರಾಧಾರವರ ಕೈ ಮತ್ತು ಕಾಲಿಗೆ ಗಾಯವಾಗಿದ್ದು ಅವರನ್ನು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮತ್ತು ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರೂ ಆಗಿರುವ ಉಪ್ಪಿನಂಗಡಿಯ ಶ್ರೀರಾಮ ಶಾಲೆಯ ಪೋಷಕರ ಸಂಘದ ಅಧ್ಯಕ್ಷ ಕರುಣಾಕರ ಸುವರ್ಣರವರು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯು.ಜಿ.ರಾಧಾರವರು ಚೇತರಿಸಿಕೊಂಡಿದ್ದು ಯಾವುದೇ ಅಪಾಯ ಉಂಟಾಗಿಲ್ಲ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version