11:09 PM Wednesday 20 - August 2025

ಸಂಸತ್ತಿನಲ್ಲೇ ‘ಹಾಕಾ’ ಡ್ಯಾನ್ಸ್ ನ ಹಾಡನ್ನು ಹಾಡಿದ ಮಹಿಳಾ ಸಂಸದೆ: ಮಸೂದೆ ವಿರೋಧಿಸಿ ಗಾಯನ!

15/11/2024

ನ್ಯೂಝಿಲೆಂಡ್‌ನ ಅತ್ಯಂತ ಕಿರಿಯ ಸಂಸದೆ ಹಾನಾ ರಾಫಿಟಿ ಮೈಪಿ ಕ್ಲಾರ್ಕ್ ಸಂಸತ್ತಿನಲ್ಲಿ ‘ಹಾಕಾ’ ನೃತ್ಯದ ಹಾಡನ್ನು ಹಾಡುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಸಂಸತ್ತಿನಲ್ಲಿ ಮಂಡಿಸಲಾದ ಮಸೂದೆಯೊಂದನ್ನು ವಿರೋಧಿಸಿದ ಅವರು, ಅದರ ಪ್ರತಿಯನ್ನು ಹರಿದು ಹಾಕುತ್ತಾ ನ್ಯೂಜಿಲೆಂಡ್‌ನ ‘ಮೌರಿ’ ಸಂಪ್ರದಾಯದ ‘ಹಾಕಾ’ ನೃತ್ಯ ಮಾಡಿದ್ದಾರೆ.

ಇದೇ ವೇಳೆ, ಕೆಲ ಸಂಸದರೂ ಅವರ ಜೊತೆಗೆ ಸೇರಿಕೊಂಡಿದ್ದು, ಗ್ಯಾಲರಿಯಲ್ಲಿ ಕುಳಿತಿದ್ದ ಸಾರ್ವಜನಿಕರೂ ಕೂಡ ಎದ್ದು ನಿಂತು ಹಾಕಾ ನೃತ್ಯದ ಹಾಡನ್ನು ಹಾಡಿದ್ದಾರೆ‌. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆಯೂ ಸಂಸತ್ತಿನಲ್ಲಿ ಹಾಕಾ ನೃತ್ಯದ ಹಾಡನ್ನು ಹಾಡುವ ಮೂಲಕ ಹಾನಾ ರಾಫಿಟಿ ಜಗತ್ ಪ್ರಸಿದ್ಧಿ ಪಡೆದಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version