2021ರ ಸೈಬರ್ ವಂಚನೆ ಪ್ರಕರಣ: ನೈಜೀರಿಯಾ ಪ್ರಜೆಗೆ 8 ವರ್ಷ ಜೈಲು ಶಿಕ್ಷೆ

27/03/2025

2021 ರಲ್ಲಿ ವೃದ್ಧರೊಬ್ಬರಿಗೆ 1 ಕೋಟಿ ರೂ.ಗಳನ್ನು ವಂಚಿಸಿದ ಆರೋಪದ ಮೇಲೆ ನೈಜೀರಿಯಾ ಪ್ರಜೆಗೆ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಜೆಫರ್ಸನ್ ಈಜ್ ಹೆನ್ರಿ ರಾಯಲ್ ಬ್ಯಾಂಕ್ ಆಫ್ ಲಂಡನ್ ನ ಅಧಿಕೃತ ಅಧಿಕಾರಿ ಎಂದು ನಟಿಸಿ, ನಕಲಿ ಇ-ಮೇಲ್ ಐಡಿ ಮತ್ತು ವೆಬ್ ಸೈಟ್ ಅನ್ನು ರಚಿಸಿದ್ದರು ಮತ್ತು ವಿಪಿಎನ್ ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ಗುರುತನ್ನು ಮರೆಮಾಚಿದ್ದ.

ಕೊಲ್ಕತ್ತಾ ನ್ಯಾಯಾಲಯವು ಹೆನ್ರಿಗೆ ಎಂಟು ವರ್ಷಗಳ ಜೈಲು ಶಿಕ್ಷೆಯ ಜೊತೆಗೆ 50,000 ರೂ.ಗಳ ದಂಡ ವಿಧಿಸಿದೆ.

ಕೋಲ್ಕತ್ತಾದ ವೃದ್ಧ ಸೈಬಲ್ ಬ್ಯಾನರ್ಜಿ ಅವರಿಗೆ ನೈಜೀರಿಯಾ ಪ್ರಜೆ 2021 ರಲ್ಲಿ 1 ಕೋಟಿ ರೂ.ಗಳನ್ನು ವಂಚಿಸಿದ್ದರು. ತಾನು ಮೋಸ ಹೋಗಿದ್ದೇನೆ ಎಂದು ಬ್ಯಾನರ್ಜಿ ಅರಿತುಕೊಂಡ ನಂತರ, ಅವರು ಕೋಲ್ಕತಾ ಪೊಲೀಸರಿಗೆ ದೂರು ನೀಡಿದ್ದರು ಮತ್ತು ಒಂದು ವರ್ಷದ ತನಿಖೆಯ ನಂತರ ಜೆಫರ್ಸನ್ ಈಜ್ ಹೆನ್ರಿಯನ್ನು ಬಂಧಿಸಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version