10:32 AM Saturday 23 - August 2025

ಸಾರಿ ಶರಪೋವಾ… ನಿಮಗೆ ಗೊತ್ತಿರಬೇಕಾದಷ್ಟು ಗುಣವಂತ ವ್ಯಕ್ತಿ ಸಚಿನ್ ಅಲ್ಲ | ಸಚಿನ್ ಅಭಿಮಾನಿಗಳಿಂದ ಕ್ಷಮೆ ಯಾಚನೆ

05/02/2021

ತಿರುವನಂತಪುರಂ: ರೈತರ ಪ್ರತಿಭಟನೆಯ ಕುರಿತು ಸಚಿನ್ ತೆಂಡೂಲ್ಕರ್ ಮಾಡಿರುವ ಟ್ವೀಟ್ ವಿರುದ್ಧ ಅಸಮಾಧಾನಗೊಂಡ ಕೇರಳ ನೆಟ್ಟಿಗರು ರಷ್ಯಾದ ಟೆನಿಸ್ ತಾರೆ ಮರಿಯಾ ಶರಪೋವಾ ಅವರ ಕ್ಷಮೆ ಯಾಚಿಸಿದ್ದು, ನೀವು ಅಂದು “ಸಚಿನ್ ಯಾರು ಎಂದು ಪ್ರಶ್ನಿಸಿದಾಗ, ನಾವು ನಿಮ್ಮನ್ನು ವಿರೋಧಿಸಿದ್ದೆವು. ಟ್ರೋಲ್ ಗಳ ಸುರಿಮಳೆ ಸುರಿಸಿದ್ದೆವು ಅದಕ್ಕಾಗಿ ನಾವು ಕ್ಷಮೆ ಯಾಚಿಸುತ್ತೇವೆ” ಎಂದು ಹೇಳಿದ್ದಾರೆ.

ಮರಿಯಾ ಶರಪೋವಾ ಅವರೇ, ನಾವು ಸಚಿನ್ ಅವರನ್ನು ಓರ್ವ ಆಟಗಾರನಾಗಿ ಮಾತ್ರ ತಿಳಿದುಕೊಂಡಿದ್ದೇವೆ. ಆದರೆ ಓರ್ವ ವ್ಯಕ್ತಿಯಾಗಿ ತಿಳಿದಿಲ್ಲ. ನಿಮ್ಮ ಖಾತೆಯಲ್ಲಿ ಕೆಟ್ಟದಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಕ್ಷಮಿಸಿ. ನಿಮಗೆ ಗೊತ್ತಿರಬೇಕಾದಷ್ಟು ಗುಣವಂತ ವ್ಯಕ್ತಿ ಅವರಲ್ಲ ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.

ರೈತರು ದೆಹಲಿಯ ಚಳಿಯಲ್ಲಿ ನಡುಗುತ್ತಾ, ಪ್ರತಿಭಟನೆ ಮಾಡುತ್ತಿದ್ದರೂ ಸಚಿನ್ ಸೇರಿದಂತೆ ಇತರ ಸೆಲೆಬ್ರೆಟಿಗಳು ತುಟಿ ತೆರೆದಿರಲಿಲ್ಲ. ನೀವು ಮಾತನಾಡಿದ್ದರೆ, ವಿದೇಶ ತಾರೆಯರು ಯಾಕೆ ಇದರ ಬಗ್ಗೆ ಮಾತನಾಡುತ್ತಿದ್ದರು? ವಿದೇಶದ ವರೆಗಗೆ ರೈತರ ಪ್ರತಿಭಟನೆ ಸದ್ದು ಮಾಡಿದೆ ಎಂದರೆ, ಸರ್ಕಾರವು ಎಷ್ಟೊಂದು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನುವುದು ತಿಳಿಯುತ್ತದೆ. ಕೇಂದ್ರ ಸರ್ಕಾರವನ್ನು ರಕ್ಷಿಸಲು ನೀವು ಭಾರತದ ಹೆಸರನ್ನು ಬಳಸಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ

Exit mobile version