2022 ರಲ್ಲಿ ‘ಹಿಂದಿನ ದ್ರೋಹಗಳಿಗೆ ಕ್ಷಮೆ ನೀಡಿ’ ಎಂದು ನಿತೀಶ್ ಕುಮಾರ್ ಲಾಲು ಯಾದವ್ ಅವರನ್ನು ಬೇಡಿಕೊಂಡಿದ್ದರು: ತೇಜಸ್ವಿ ಯಾದವ್ ಹೇಳಿಕೆ

16/02/2024

2022 ರಲ್ಲಿ ಎನ್‌ಡಿಎ ತೊರೆಯಲು ಪ್ರಯತ್ನಿಸುವಾಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಪೋಷಕರು, ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ರಾಬ್ರಿ ದೇವಿ ಅವರಲ್ಲಿ “ಹಿಂದಿನ ದ್ರೋಹಗಳಿಗೆ ಕ್ಷಮೆಯಾಚಿಸಿದ್ದರು” ಎಂದು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಶುಕ್ರವಾರ ಹೇಳಿದ್ದಾರೆ.

ನಿತೀಶ್ ಜಿ ಕ್ಷಮೆ ಬೇಡಿದ ನಂತರ, ಬಿಜೆಪಿ ತನ್ನ ಪಕ್ಷವನ್ನು ವಿಭಜಿಸಲು ಮತ್ತು ತನ್ನ ಶಾಸಕರನ್ನು ಹೊರಹಾಕಲು ಪ್ರಯತ್ನಿಸುತ್ತಿದೆ ಎಂದು ನನ್ನ ಹೆತ್ತವರಿಗೆ ಹೇಳಿದ್ದರು ಎಂದು ತೇಜಸ್ವಿ ಯಾದವ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ನಿತೀಶ್ ಕುಮಾರ್ ಅವರು ಆಗಸ್ಟ್ 2022 ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದರು ಮತ್ತು ರಾಜ್ಯದಲ್ಲಿ ಸರ್ಕಾರ ರಚಿಸಲು ಆರ್ ಜೆಡಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ಉಪಮುಖ್ಯಮಂತ್ರಿಯಾಗಿ ತೇಜಸ್ವಿ ಯಾದವ್ ಮತ್ತು ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದ್ದರು.

ನಿತೀಶ್ ಕುಮಾರ್ ಕಳೆದ ತಿಂಗಳು ಮತ್ತೆ ಪಕ್ಷಾಂತರ ಮಾಡಲು ನಿರ್ಧರಿಸಿದರು ಮತ್ತು ಎನ್ ಡಿಎ ಸರ್ಕಾರವನ್ನು ರಚಿಸಲು ದಾಖಲೆಯ ಒಂಬತ್ತನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದರು.

ಇತ್ತೀಚಿನ ಸುದ್ದಿ

Exit mobile version