ಎನ್ ಡಿಎ ಸೇರಿದ ನಿತೀಶ್ ಕುಮಾರ್ ಗೆ ಶುರುವಾಯ್ತು ಭಯ: ಮುಸ್ಲಿಮರ ಓಲೈಕೆಗೆ ಶತಪ್ರಯತ್ನ

ಬಿಹಾರದ ಮುಸ್ಲಿಮರು ತನ್ನನ್ನು ತಿರಸ್ಕರಿಸುತ್ತಾರೆ ಎಂಬ ಭೀತಿ ಬಿಹಾರ ಮುಖ್ಯಮಂತ್ರಿಯ ನಿತೀಶ್ ಕುಮಾರ್ ಅವರಲ್ಲಿ ಕಾಣಿಸಿಕೊಂಡಿದ್ದು ಇದೀಗ ಮುಸ್ಲಿಂ ಓಲೈಕೆಗೆ ಪ್ರಾರಂಭಿಸಿದ್ದಾರೆ. ತಾನು ಮುಸ್ಲಿಮರಿಗೆ ಏನೇನು ಉಪಕಾರ ಮಾಡಿರುವೆ ಎಂಬುದನ್ನು ಶೇಕ್ಪುರದಲ್ಲಿ ಆಯೋಜಿಸಲಾದ ಚುನಾವಣಾ ಕಾರ್ಯಕ್ರಮದಲ್ಲಿ ಅವರು ಬಿಡಿಸಿ ಹೇಳಿದ್ದಾರೆ. ತಿಂಗಳುಗಳ ಹಿಂದೆ ನಿತೀಶ್ ಕುಮಾರ್ ಅವರು ಎನ್.ಡಿ.ಎ ಪಾಳಯ ಸೇರಿಕೊಂಡಿರುವುದು ಗಮನಾರ್ಹ.
‘ನನ್ನ ಆಡಳಿತ ಅವಧಿಯಲ್ಲಿ ಮುಸ್ಲಿಮರಿಗೆ ಸುಖಾನುಭವವನ್ನು ನೀಡಿದ್ದೇನೆ. ಮುಖ್ಯವಾಗಿ ಮುಸ್ಲಿಮರ ದಫನ ಭೂಮಿಗೆ ರಕ್ಷಣೆ ನೀಡಿದ್ದೇನೆ. 8000 ಕಬರ್ ಸ್ಥಾನಗಳಿಗೆ ಬೌಂಡರಿ ಗೋಡೆಯನ್ನು ಸರಕಾರದ ವತಿಯಿಂದ ನಿರ್ಮಿಸಿದ್ದೇನೆ. ಹೀಗೆ ಬೌಂಡರಿ ಗೋಡೆಯನ್ನು ಕಟ್ಟಬೇಕಾದ ಇನ್ನೂ ಸಾವಿರಕ್ಕಿಂತಲೂ ಅಧಿಕ ದಫನ ಭೂಮಿಗಳಿವೆ ಎಂದವರು ಹೇಳಿದ್ದಾರೆ.
ಎನ್ ಡಿಎ ಪಾಳಯ ಸೇರಿರುವ ನಿತೀಶ್ ಕುಮಾರ್ ಅವರು ಸದ್ಯ ತಿರುಗೇಟಿನ ಭೀತಿಯಲ್ಲಿದ್ದಾರೆ. ಮುಸ್ಲಿಮರು ನಿತೀಶ್ ಕುಮಾರ್ ರಿಂದ ದೂರ ಸರಿಯುತ್ತಿದ್ದಾರೆ ಅನ್ನುವ ಸಮೀಕ್ಷೆಗಳು ಬಹಿರಂಗ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಮುಸ್ಲಿಮರನ್ನು ತಲುಪುವ ಹತಾಶ ಪ್ರಯತ್ನವನ್ನು ನಿತೀಶ್ ಕುಮಾರ್ ಮಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ನಿತೀಶ್ ಅವರು ಬಿಜೆಪಿಯ ಜೊತೆಗಿದ್ದ ಸಮಯದಲ್ಲೂ ಮುಸ್ಲಿಮರು ನಿತೀಶ್ರನ್ನು ಬೆಂಬಲಿಸಿದ ಇತಿಹಾಸವಿದೆ.
2005 ಮತ್ತು 2019ರ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿ ಜೊತೆ ಇದ್ದ ನಿತೀಶ್ ಕುಮಾರ್ ರನ್ನು ಮುಸ್ಲಿಮರು ಬೆಂಬಲಿಸಿದ್ದರು. 2015ರಲ್ಲಿ ಇವರು ಲಲ್ಲು ಪ್ರಸಾದ್ ಜೊತೆ ಸೇರಿಕೊಂಡಿದ್ದರು. ಆಗಲೂ ಮುಸ್ಲಿಮರು ನಿತೀಶ್ ರನ್ನು ಬೆಂಬಲಿಸಿದ್ದರು. ಆದರೆ 2017ರ ಬಳಿಕ ನಿತೀಶ್ ಕುಮಾರ್ ಗೆ ಮುಸ್ಲಿಮರ ಬೆಂಬಲ ಕಡಿಮೆಯಾಗುತ್ತಾ ಬಂದಿದೆ.. ಅದಕ್ಕೆ ಅವರು ಎನ್.ಡಿ.ಎ ಪಾಳಯ ಸೇರಿಕೊಂಡಿರುವುದು ಒಂದು ಕಾರಣವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth