ಟ್ರಂಪ್ ಗೆ ನಿರಾಸೆ: ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಸೆ ಪಟ್ಟಿದ್ದ ಟ್ರಂಪ್ ಗೆ ನಿರಾಸೆ

nobel prize
10/10/2025

ವಾಷಿಂಗ್ಟನ್: ನೊಬೆಲ್ ಶಾಂತಿ ಪುರಸ್ಕಾರ(Nobel Peace Prize)ಕ್ಕಾಗಿ ಹಲವು ಸರ್ಕಸ್ ನಡೆಸಿದರೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಸೆಗೆ ಇದೀಗ ತಣ್ಣೀರೆರಚಿದಂತಾಗಿದೆ. ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿಗೆ  ವೆನೆಜುವೆಲಾದ ರಾಜಕಾರಣಿ ಮತ್ತು ಕೈಗಾರಿಕಾ ಇಂಜಿನಿಯರ್ ಮಾರಿಯಾ ಕೊರಿನಾ ಮಚಾದೋ ಅವರ ಪಾಲಾಗಿದೆ.

ಮಾರಿನಾ ಕೊರಿನಾ ಮಚಾದೊ ಅವರು ವೆನೆಜುವೆಲಾದ ಜನರ ಪ್ರಜಾಪ್ರಭುತ್ವ ಹಕ್ಕುಗಳಿಗಾಗಿ ನಿರಂತರ ಹೋರಾಟ ಮಾಡಿದ ಸಾಧನೆಗೆ ಈ ಪ್ರತಿಷ್ಠಿತ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.

ನೊಬೆಲ್ ಶಾಂತಿ ಪುರಸ್ಕಾರಕ್ಕೆ ಈ ಬಾರಿ ಟ್ರಂಪ್ ಮಾಡದ ಸಾಹಸಗಳಿಲ್ಲ, ನಾನು ಏಳು ಯುದ್ಧಗಳನ್ನು ನಿಲ್ಲಿಸಿದ್ದೇನೆ, 8ನೇ ಯುದ್ಧವನ್ನು ಪರಿಹರಿಸುವ ಪ್ರಯತ್ನದಲ್ಲಿದ್ದೇನೆ, ನನಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಿ ಎಂದು ಒತ್ತಾಯ ಮಾಡುವ ಮೂಲಕ ಟ್ರಂಪ್ ವಿಶ್ವದ ಎದುರು ಕಾಮಿಡಿಯನ್ ಆಗಿದ್ದರು.

ನೊಬೆಲ್ ಗಾಗಿ ಟ್ರಂಪ್ ನಡೆಸಿದ ಹೈಡ್ರಾಮಾಗಳ ನಂತರವೂ ಪ್ರಶಸ್ತಿ ಅವರ ಕೈತಪ್ಪಿ ಹೋಗಿದೆ. ನೊಬೆಲ್ ಪ್ರಶಸ್ತಿಗಾಗಿ ನಿರಂತರ ಶ್ರಮಪಟ್ಟಿದ್ದ ಟ್ರಂಪ್ ಗೆ ಭಾರೀ ನಿರಾಸೆಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version