11:32 AM Wednesday 29 - October 2025

ಎಕ್ಸಿಟ್‌ ಪೋಲ್‌ ಅಲ್ಲ, ಮೋದಿ ಮೀಡಿಯಾ ಪೋಲ್‌: ರಾಹುಲ್ ಗಾಂಧಿ

rahul gandhi
02/06/2024

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ ಡಿಎ ಕೂಟಕ್ಕೆ ಬಹುಮತ ಎಂಬ ಚುನಾವಣೋತ್ತರ ಸಮೀಕ್ಷೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.

ಇದು ಎಕ್ಸಿಟ್‌ ಪೋಲ್‌ ಅಲ್ಲ, ಮೋದಿ ಮೀಡಿಯಾ ಪೋಲ್‌, ಮೋದಿ ಫ್ಯಾಂಟಸಿ ಪೋಲ್‌ ಅಷ್ಟೇ ಎಂದು ಹೇಳಿದ್ದಾರೆ. ಅಲ್ಲದೇ ಇಂಡಿಯಾ ಒಕ್ಕೂಟ 295?, 295 ಸ್ಥಾನ ಬರುತ್ತದೆ ಎಂದು ಅವರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ 5 ರಾಜ್ಯಗಳಲ್ಲಿ ಕ್ವೀನ್‌ ಸ್ವೀಪ್‌ ಮಾಡಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಅಂದಾಜಿಸಿವೆ. ಬಹುತೇಕ ಸಮೀಕ್ಷೆಗಳು ಎನ್‌ ಡಿಎಗೆ 350+ ಸ್ಥಾನ ನೀಡಿವೆ. ಟುಡೇಸ್‌ ಚಾಣಕ್ಯ ಬಿಜೆಪಿ 335 ± 15, ಎನ್‌ ಡಿಎ 400 ± 15 ಸ್ಥಾನ ನೀಡಿದೆ.

ಇಂಡಿಯಾ ಟುಡೆ ಸಮೀಕ್ಷೆ ಈ ಬಾರಿಗೆ ಎನ್‌ ಡಿಎಗೆ 361-401, ಇಂಡಿಯಾ ಒಕ್ಕೂಟಕ್ಕೆ 131-166, ಇತರರಿಗೆ 8-20 ಸ್ಥಾನಗಳನ್ನು ನೀಡಿದೆ.

ಚುನಾವಣಾ ಸಮೀಕ್ಷೆಗಳು ಮೋದಿ ಮೀಡಿಯಾದ ಫ್ಯಾಂಟಸಿ ಪೋಲ್‌ ಎಂದಿರುವ ರಾಹುಲ್ ಗಾಂಧಿ, ಸಮೀಕ್ಷೆಗಳನ್ನು ತಳ್ಳಿ ಹಾಕಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version