ಬಣಕಲ್ ಸುತ್ತಮುತ್ತಲಿನ ಚರ್ಚ್ ಗಳಲ್ಲಿ ನೊವೇನಾ ಪ್ರಾರ್ಥನೆ, ಮಾತೆ ಮರಿಯಮ್ಮನವರಿಗೆ ಹೂ ಸಮರ್ಪಣೆ

novena
01/09/2023

ಕೊಟ್ಟಿಗೆಹಾರ: ಬಣಕಲ್, ಕೊಟ್ಟಿಗೆಹಾರ, ಬಾಳೂರು,ಜಾವಳಿ, ಕೂವೆ, ಕೆಳಗೂರು ಸುತ್ತಮುತ್ತಲಿನ ಚರ್ಚ್ ಗಳಲ್ಲಿ ಸೆಪ್ಟೆಂಬರ್ 8 ರಂದು ಮಾತೆ ಮರಿಯಮ್ಮನವರ ಹುಟ್ಟು ಹಬ್ಬದ ಪ್ರಯುಕ್ತ ಒಂಬತ್ತು ದಿನಗಳ ವಿಶೇಷ ಪ್ರಾರ್ಥನೆ (ನೊವೇನಾ) ಬುಧವಾರದಿಂದ ಆರಂಭವಾಗಿದೆ.

ಜಿಲ್ಲೆಯ ಆಯಾ ಚರ್ಚುಗಳಲ್ಲಿ  ಧರ್ಮಗುರುಗಳು ಮಾತೆ ಮರಿಯಮ್ಮನವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ.  ಭಕ್ತಾಧಿಗಳು ಬಾಲಿಕಾ ಮರಿಯ ಪ್ರತಿಮೆಗೆ ಹೂಗಳನ್ನು ಸಮರ್ಪಿಸುವ ಮೂಲಕ ಗೌರವ ಸಲ್ಲಿಸಿ ಭಕ್ತಿಗೀತೆಗಳನ್ನು ಹಾಡಿ ಶೃದ್ದಾಭಕ್ತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಸೆಪ್ಟಂಬರ್ 8ರಂದು ಮಾತೆ ಮರಿಯಮ್ಮನ ಜಯಂತಿ ಅಥವಾ ಹೊಸಕ್ಕಿ ಹಬ್ಬದ ಅಂಗವಾಗಿ ಈ ವಿಶೇಷ ನೋವೇನಾಗಳು ರಾಜ್ಯದಾದ್ಯಂತ ನಡೆಯುತ್ತವೆ.ಒಂಬತ್ತು ದಿನವೂ ಪ್ರತಿಯೊಬ್ಬರೂ ಮಕ್ಕಳಿಂದ ಹಿಡಿದು ಹಿರಿಯರವರೆಗೆ ತಟ್ಟೆಗಳಲ್ಲಿ ವಿಧವಿಧವಾದ ಹೂಗಳನ್ನು ತಂದು ನೊವೇನಾ ಪ್ರಾರ್ಥನೆಯಲ್ಲಿ ಮಾತೆಗೆ ಸಮರ್ಪಿಸುವುದು ಸಂಪ್ರದಾಯವಾಗಿದ್ದು, ನೊವೇನಾ ವಿಶೇಷ ಪ್ರಾರ್ಥನೆಯಿಂದ ಮಾತೆ ಮರಿಯಮ್ಮನವರು ಸರ್ವ ಕುಟುಂಬಗಳಿಗೆ ಹೇರಳವಾದ ಆಶೀರ್ವಾದ, ಐಕ್ಯತೆ, ಶಾಂತಿ ನೀಡುತ್ತಾರೆ ಎಂಬ ದೃಢ ನಂಬಿಕೆ ಭಕ್ತರದ್ದಾಗಿದೆ.

ಇತ್ತೀಚಿನ ಸುದ್ದಿ

Exit mobile version