ಶಾಸಕರ ತರಬೇತಿ ಶಿಬಿರದ ಅತಿಥಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವಿಚಾರ: ಸ್ಪೀಕರ್ ಯು.ಟಿ.ಖಾದರ್ ಪ್ರತಿಕ್ರಿಯೆ

ಶಾಸಕರ ತರಬೇತಿ ಶಿಬಿರದ ಅತಿಥಿಗಳ ಬಗ್ಗೆ ಆಕ್ಷೇಪ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ವಿಧಾನಸಭೆ ಸಭಾಪತಿ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ.
ಹೊಸ ಶಾಸಕರಿಗೆ ತರಬೇತಿ ನೀಡಲು ವಿವಿಧ ವಿಷಯ ಇಟ್ಟುಕೊಂಡು ಮಾಡ್ತಾ ಇದೀವಿ. ಎಚ್.ಕೆ.ಪಾಟೀಲ್, ಕೃಷ್ಣಬೈರೇಗೌಡ, ಟಿ.ಬಿ.ಜಯಚಂದ್ರ, ಸುರೇಶ್ ಕುಮಾರ್ ಸೇರಿ ಸಂಸದೀಯ ಪಟುಗಳು ತರಬೇತಿ ಕೊಡ್ತಾರೆ. ಅದರ ಜೊತೆಗೆ ಒತ್ತಡ ರಹಿತ ಕೆಲಸದ ಬಗ್ಗೆ ತಿಳಿಸಲು ಕೆಲ ಆಧ್ಯಾತ್ಮಿಕ ವ್ಯಕ್ತಿಗಳನ್ನು ಕೂಡ ಕರೆದಿದ್ದೇವೆ. ಆದರೆ ಇನ್ನೂ ಅವರಲ್ಲಿ ಕೆಲವರು ಬರೋ ಬಗ್ಗೆ ದೃಢಪಟ್ಟಿಲ್ಲ ಎಂದರು.
ಇದರ ಬಗ್ಗೆ ಯಾವುದೇ ವಿಚಾರ ಇದ್ರೂ ಈಗಲೇ ಹೇಳೋದು ಪ್ರಭುತ್ವದ ಹೇಳಿಕೆ ಅಲ್ಲ. ತರಬೇತಿ ಶಿಬಿರ ನೋಡಿದ ಬಳಿಕ ಅದರ ಅಭಿಪ್ರಾಯ ಹೇಳಲಿ. ಯಾವುದೇ ವಿಚಾರದ ಬಗ್ಗೆ ಈಗಲೇ ಪೂರ್ವಗ್ರಹ ಪೀಡಿತ ಚರ್ಚೆ ಸರಿಯಲ್ಲ. ಸಾಮಾಜಿಕ ತಾಣಗಳಲ್ಲಿ ಸ್ಪಷ್ಟನೆ ಇಲ್ಲದೇ ಬರೆಯೋದು ಅವರ ವ್ಯಕ್ತಿತ್ವಕ್ಕೆ ಬಿಟ್ಟ ವಿಚಾರ. ತರಬೇತಿ ಶಿಬಿರ ಆದ ನಂತರ ಹೇಳಲಿ. ಆದರೆ ಅದು ಇನ್ನೂ ಆರಂಭವಾಗಿಲ್ಲ. ರವಿಶಂಕರ್ ಗುರೂಜಿ ಊರಲ್ಲೇ ಇಲ್ಲ, ಅವರು ಅಮೆರಿಕಾದಲ್ಲಿದ್ದಾರೆ.
ನಾನು ಆರೋಗ್ಯ ಸಚಿವ ಆದಾಗಿನಿಂದಲೂ ಅವರನ್ನ ಭೇಟಿಯಾಗ್ತಾ ಇದೀನಿ. ಮಾನವೀಯತೆ ಮತ್ತು ಆತ್ಮೀಯತೆ ಇದೆ, ಉತ್ತಮ ಸಂಬಂಧ ಇದೆ. ಭೇಟಿ ತಕ್ಷಣ ಅವರು ತರಬೇತಿ ಶಿಬಿರಕ್ಕೆ ಬರ್ತಾರೆ ಅಂತ ಅಲ್ಲ. ಶಿಬಿರ ಆದ ನಂತರ ಸಲಹೆ ಸೂಚನೆ ನಾನು ಸ್ವಾಗತ ಮಾಡ್ತೇನೆ. ಬರೋರ ಬಗ್ಗೆ ದೃಢಪಟ್ಟಿಲ್ಲ, ಕೆಲವರು ಮಾತ್ರ ಬರ್ತೇನೆ ಹೇಳಿದ್ದಾರೆ ಅಂದ್ರು.
ಮಾಜಿ ಸ್ಪೀಕರ್ ಗಳು, ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಕೂಡ ತರಬೇತಿ ಕೊಡ್ತಾರೆ. ಹಿರಿಯರು ತಮ್ಮ ರಾಜಕೀಯ ಜೀವನದ ಬಗ್ಗೆಯೂ ಹೇಳ್ತಾರೆ. ಕ್ಯಾಂಪ್ ಆದ ಬಳಿಕ ಎಲ್ಲಾ ವಿಷಯದ ಬಗ್ಗೆಯೂ ಚರ್ಚೆ ಮಾಡೋಣ. ಈಗಲೇ ಅದರ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಬರೆಯುವುದು ತಪ್ಪು ಅಂದ್ರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw