ಒಡಿಶಾದ ಮೊದಲ ಮುಸ್ಲಿಂ ಮಹಿಳಾ ಶಾಸಕಿ ಯಾರು..? ಚುನಾವಣೆಗೆ ತಯಾರಿ ನಡೆಸಿದ್ದು ಕೇವಲ 30 ದಿನಗಳು ಮಾತ್ರ..!

09/06/2024

ಈ ವರ್ಷದ ಆರಂಭದಲ್ಲಿ ಒಡಿಶಾದ ಮೊದಲ‌ ಮುಸ್ಲಿಂ ಶಾಸಕಿ‌ ಸೋಫಿಯಾ ಫಿರ್ದೌಸ್ ರ ತಂದೆ, ಒಡಿಶಾದ ಕಟಕ್‌ನ್ ಆಗಿನ ಕಾಂಗ್ರೆಸ್ ಶಾಸಕ ಮೊಹಮ್ಮದ್ ಮೊಕ್ವಿಮ್ ಮರುಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದರು. ರಾಜ್ಯ ವಿಧಾನಸಭಾ ಚುನಾವಣೆಗಳು ಪ್ರಾರಂಭವಾಗಲು ಕೇವಲ ಒಂದು ತಿಂಗಳ ಮೊದಲು, ಒರಿಸ್ಸಾ ಗ್ರಾಮೀಣ ವಸತಿ ಅಭಿವೃದ್ಧಿ ನಿಗಮದಲ್ಲಿ ಸಾಲ ವಂಚನೆ ಪ್ರಕರಣದಲ್ಲಿ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡದ ಕಾರಣ ರಿಯಲ್ ಎಸ್ಟೇಟ್ ಸಂಸ್ಥೆ ಮೆಟ್ರೋ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಮೊಕ್ವಿಮ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರು ಎಂದು ಕೋರ್ಟ್ ಘೋಷಣೆ ಮಾಡಿತ್ತು.

ಚುನಾವಣೆಗೆ ಕೇವಲ 30 ದಿನಗಳು ಬಾಕಿ ಉಳಿದಿತ್ತು.‌ ಅಭ್ಯರ್ಥಿಯೇ ಇಲ್ಲದ ಕಾರಣ ಕಾಂಗ್ರೆಸ್ ಫಿರ್ದೌಸ್ ಮೇಲೆ ಭರವಸೆ ಇಟ್ಟಿತು. ರಿಯಲ್ ಎಸ್ಟೇಟ್ ಡೆವಲಪರ್ ವೃತ್ತಿಯನ್ನು ತೊರೆದು ಬಿಜೆಪಿಯ ಪೂರ್ಣ ಚಂದ್ರ ಮಹಾಪಾತ್ರ ಅವರನ್ನು 8,001 ಮತಗಳ ಅಂತರದಿಂದ ಸೋಲಿಸುವ ಮೂಲಕ ಒಡಿಶಾ ರಾಜ್ಯದ ಮೊದಲ ಮಹಿಳಾ ಮುಸ್ಲಿಂ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಈ ಕುರಿತು ಎನ್‌ಡಿಟಿವಿಯೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಫಿರ್ದೌಸ್, ತಮ್ಮ ಅನಿರೀಕ್ಷಿತ ರಾಜಕೀಯ ಪ್ರವೇಶವನ್ನು ಮುಕ್ತವಾಗಿ ನೆನಪಿಸಿಕೊಂಡರು.
“ನಾನು ರಾಜಕಾರಣಿಯಲ್ಲ” ಎಂದು ಅವರು ಒತ್ತಿ ಹೇಳಿದರು. “ನನ್ನ ತಂದೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗದಿದ್ದಾಗ, ನಮ್ಮ ನಿವಾಸದಲ್ಲಿ 400-500 ಬೆಂಬಲಿಗರ ದೊಡ್ಡ ಸಭೆ ಸೇರಿತ್ತು. ಕಟಕ್ ನಲ್ಲಿ ನನ್ನ ತಂದೆ ಸ್ಥಾಪಿಸಿದ ಕಠಿಣ ಪರಿಶ್ರಮ ಮತ್ತು ದೃಢವಾದ ನೆಲೆಯನ್ನು ಗುರುತಿಸಿ, ಅವರು ನನ್ನನ್ನು ಕಣಕ್ಕೆ ಇಳಿಯಲು ಸರ್ವಾನುಮತದಿಂದ ಅನುಮೋದಿಸಿದರು ಎಂದು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version