11:39 AM Friday 14 - November 2025

ಒಗ್ಗಟ್ಟಿನಿಂದ ನಡೆದರೆ ದೇಶದ ಮುನ್ನಡೆ ಸಾಧ್ಯ: ಮಾಣಿಲ ಶ್ರೀ

belthaday
16/08/2022

ಬೆಳ್ತಂಗಡಿ: ಸಂತುಷ್ಟಿ, ಅಸಮಾಧಾನ, ಅಸಹಕಾರಗಳನ್ನು ತೋರದೆ ಸಂಘರ್ಷ ಪ್ರವೃತ್ತಿಯ ಮೂಲಕ ಯಾರಿಗೂ ನೋವುಂಟು ಮಾಡದೆ ಒಗ್ಗಟ್ಟಿನಿಂದ ನಡೆದರೆ ದೇಶದ ಮುನ್ನಡೆ ಸಾಧ್ಯ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಅವರು ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲು ಸಿಯೋನ್ ಆಶ್ರಮ ಟ್ರಸ್ಟ್ ವತಿಯಿಂದ ನಡೆದ ತಾಲೂಕಿನ 75 ವರ್ಷ ದಾಟಿದ ಹಿರಿಯ ನಾಗರಿಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರದ್ಧಾಕೇಂದ್ರಗಳು ಮಕ್ಕಳಲ್ಲಿ ಮೌಲ್ಯಯುತ ವಿಚಾರಗಳ ಮೂಲಕ ಪ್ರೀತಿ,ಗೌರವ,ಪ್ರಕೃತಿ ಬಾಂಧವ್ಯಗಳನ್ನು ಬಿಂಬಿಸಿ ದೇಶಪ್ರೇಮವನ್ನು ಮೆರೆಯಲು ಪ್ರೇರಣೆ ನೀಡಬೇಕು. ಅನಾಥರ, ದೀನರ,ದುಃಖಿತರ ಬದುಕಿಗೆ ಆಶ್ರಯ ನೀಡುವ ಸಿಯೋನ್ ಆಶ್ರಮದ ಸೇವೆ ಅನನ್ಯವಾದುದು. ಇಲ್ಲಿನ ಚಟುವಟಿಕೆಗಳು ನಿರಂತರವಾಗಿ ಸಾಗಿ ಆಶ್ರಮವಾಸಿಗಳ ಜೀವನದ ನೆಮ್ಮದಿಗೆ ಕಾರಣವಾಗಲಿ ಎಂದು ಹೇಳಿದರು.

ಬೆಳ್ತಂಗಡಿ ಧರ್ಮ ಕೇಂದ್ರದ ಫಾ.ಜೋಸ್ ವಲೀಯಪರಂಬಿಲ್ ಮಾತನಾಡಿ, ಎಲ್ಲರನ್ನೂ ಸಮಾನವಾಗಿ ಕಾಣುವ ಭಾರತ ದೇಶದ ಸಂವಿಧಾನ ಅತ್ಯಂತ ಶ್ರೇಷ್ಠವಾದದ್ದು. ಎಲ್ಲ ಧರ್ಮೀಯರ ಆಚಾರ, ವಿಚಾರಗಳಿಗೆ ಸಮಾನ ಗೌರವವಿದೆ. ಭ್ರಷ್ಟಾಚಾರ ನಿರ್ಮೂಲನೆ ಮೂಲಕ ಸ್ವಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ ಎಂದರು.

ಎಂ.ಎಲ್.ಸಿ. ಪ್ರತಾಪಸಿಂಹ ನಾಯಕ್ ಮಾತನಾಡಿ, ದೇಶ ನನ್ನದೆನ್ನುವ ಭಾವನೆ ಜಾಗೃತವಾಗಿರಬೇಕು. ಬದುಕಿಗೆ ಮಾರ್ಗದರ್ಶನ ನೀಡುವ ಹಿರಿಯರನ್ನು ಗೌರವಿಸಬೇಕು. ಪರಸ್ಪರ ಪ್ರೀತಿ ನಂಬಿಕೆ, ಒಗ್ಗಟ್ಟಿನಿಂದ ವೈವಿಧ್ಯತೆಯಲ್ಲಿ ಏಕತೆ ಸಾರುವ ಮೂಲಕ ನಮ್ಮ ದೇಶದ ಕೀರ್ತಿಪತಾಕೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸುವ ಕೆಲಸ ನಡೆದಿದೆ ಎಂದರು.

ಮ್ಯಾನೇಜಿಂಗ್ ಟ್ರಸ್ಟಿ ಡಾ.ಯು.ಸಿ.ಪೌಲೋಸ್ ಅಧ್ಯಕ್ಷತೆ ವಹಿಸಿದ್ದರು.ಸುನ್ನಿ ಯುವಜನ ಸಂಘದ ಅಧ್ಯಕ್ಷ ಡಾ. ಎಂ.ಎಸ್. ಎಂ.ಅಬ್ದುಲ್ ರಶೀದ್ ಝೈನಿ,ಎಸ್. ಕೆ.ಡಿ. ಆರ್. ಡಿ.ಪಿ.ಯ ಸತೀಶ ಶೆಟ್ಟಿ, ಟ್ರಸ್ಟ್ ಸದಸ್ಯೆ ಮೇರಿ ಯು.ಪಿ., ಸದಸ್ಯರಾದ ತೋಮಸ್ ಎಂ.ಪಿ., ಸುಭಾಷ್ ಯು.ಪಿ, ತಾಲೂಕು ನಿವೃತ್ತ ವೈದ್ಯಾಧಿಕಾರಿ ಡಾ. ಕಲಾಮಧು,ಡೆನ್ನಿಸ್ ಮಸ್ಕರೇನಸ್, ಆಸೀಫ್ ಉಪಸ್ಥಿತರಿದ್ದರು.

ನಿವೃತ್ತ ಸೇನಾಧಿಕಾರಿ ಎಂ.ವಿ.ಭಟ್ ಧ್ವಜಾರೋಹಣ ನೆರವೇರಿಸಿದರು. ಗಂಡಿ ಬಾಗಿಲು ಸೈಂಟ್ ತೋಮಸ್ ಚರ್ಚ್ ನ ಧರ್ಮಗುರು ಫಾ. ಮ್ಯಾಥ್ಯೂ ವೆಟ್ಟಂತಡತ್ತಿಲ್ ಸ್ವಾಗತಿಸಿದರು. ಆಡಳಿತಾಧಿಕಾರಿ ಶೋಭಾ ಯು.ಪಿ. ವಂದಿಸಿದರು,

ಈ ಸಂದರ್ಭದಲ್ಲಿ ಹಿರಿಯ ಚೇತನರನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸೇರಿ 300 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

.

ಇತ್ತೀಚಿನ ಸುದ್ದಿ

Exit mobile version