ಬಿಜೆಪಿ ನೇತೃತ್ವದ ಗೋವಾದಲ್ಲಿ ತೈಲ ಬೆಲೆ ಏರಿಕೆ: ಕರ್ನಾಟಕದ ಬಿಜೆಪಿ ನಾಯಕರಿಗೆ ಇರಿಸುಮುರಿಸು

22/06/2024

ಕರ್ನಾಟಕ ಸರ್ಕಾರದ ಇಂಧನ ದರ ಏರಿಕೆಯನ್ನು ಟೀಕಿಸುತ್ತಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಗೋವಾ ಬಿಜೆಪಿ ಸರ್ಕಾರ ಶಾಕ್ ಕೊಟ್ಟಿದೆ. ಗೋವಾದಲ್ಲಿಯೂ ಇಂಧನ ದರ ಏರಿಕೆ ಮಾಡಿ ಅಲ್ಲಿನ ಬಿಜೆಪಿ ಸರ್ಕಾರ ಆದೇಶ ಹೊರಡಿಸಿದ್ದು, ಶನಿವಾರದಿಂದಲೇ ಪರಿಷ್ಕೃತ ದರ ಜಾರಿಯಾಗಿದೆ. ಗೋವಾರದಲ್ಲಿ ಈಗ ಪೆಟ್ರೋಲ್ ಬೆಲೆ ಲೀಟರ್‌ಗೆ ೯೬.೪೦ ರೂ ಆಗಿದ್ದು, ಡೀಸೆಲ್‌ಗೆ ೮೮.೨೬ ರೂ.ಗೆ ಏರಿಕೆಯಾಗಿದೆ.

ಗೋವಾ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಣಬ್ ಜಿ ಭಟ್ ಶುಕ್ರವಾರ ಪರಿಷ್ಕೃತ ದರ ಅಧಿಸೂಚನೆ ಹೊರಡಿಸಿದ್ದಾರೆ. ಅದರಂತೆ, ಗೋವಾದಲ್ಲಿ ಪೆಟ್ರೋಲ್ ಬೆಲೆ ೧ ರೂಪಾಯಿ, ಡೀಸೆಲ್ ೩೬ ಪೈಸೆ ಏರಿಕೆಯಾಗಿದೆ.
ಇಂಧನ ದರ ಏರಿಕೆ ಬಗ್ಗೆ ಮಾತನಾಡಿರುವ ವಿಪಕ್ಷ ನಾಯಕ, ಕಾಂಗ್ರೆಸ್ ನಾಯಕ ಯೂರಿ ಅಲೆಮಾವೊ, “ಗೋವಾ ಸರ್ಕಾರ, ‘ಸಂವೇದನಾ ರಹಿತ ಸರ್ಕಾರ’ವಾಗಿದೆ. ಬೆಲೆ ಏರಿಕೆ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು” ಎಂದು ಆಗ್ರಹಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡಿದೆ. ಅದನ್ನು ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದರು. ಇದೇ ಸಮಯದಲ್ಲಿ ಗೋವಾದಲ್ಲಿ ಬಿಜೆಪಿ ಸರ್ಕಾರವೇ ಇಂಧನ ದರ ಏರಿಕೆ ಮಾಡಿದೆ. ಇದು, ಇಲ್ಲಿನ ಬಿಜೆಪಿ ನಾಯಕರನ್ನು ಪೇಚಿಗೆ ಸಿಲುಕಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version