4:45 AM Wednesday 22 - October 2025

ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದವರಿಗೆ ಹಲ್ಲೆ ಪ್ರಕರಣ: ದೆಹಲಿ ಪೊಲೀಸ್ ಅಧಿಕಾರಿ ಸಸ್ಪೆಂಡ್

08/03/2024

ಜನನಿಬಿಡ ರಸ್ತೆ ಬದಿಯಲ್ಲಿ ಶುಕ್ರವಾರದ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಅಲ್ಲಿದ್ದ ಮುಸ್ಲಿಂ ವ್ಯಕ್ತಿಗಳಿಗೆ ಒದ್ದು ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ಈ ಕುರಿತಾದ 34 ಸೆಕೆಂಡುಗಳ ಆಘಾತಕಾರಿ ವೀಡಿಯೊದಲ್ಲಿ ದೆಹಲಿಯ ಇಂದರ್ ಲೋಕ್ ಪ್ರದೇಶದ ಪೊಲೀಸ್ ಠಾಣೆಯ ಉಸ್ತುವಾರಿ, ನೆರೆಹೊರೆಯ ಮಸೀದಿಯ ಬಳಿ ಪ್ರಾರ್ಥಿಸುತ್ತಿದ್ದ ಕೆಲವು ಪುರುಷರನ್ನು ಚದುರಿಸಲು ಪ್ರಯತ್ನಿಸಿದ್ದಾರೆ. ಅಲ್ಲದೇ ಪೊಲೀಸ್ ಅಧಿಕಾರಿಯು ಇಬ್ಬರು ಪುರುಷರಿಗೆ ಒದೆಯುತ್ತಾನೆ. ಅಲ್ಲದೇ ಇನ್ನೋರ್ವ ವ್ಯಕ್ತಿಯ ಕುತ್ತಿಗೆ ಹಿಡಿದು ಹೊಡೆಯುವ ದೃಶ್ಯ ಕಂಡುಬಂದಿದೆ.

ಎರಡನೇ ಮತ್ತು ದೀರ್ಘವಾದ ವೀಡಿಯೊದಲ್ಲಿ, ಅದೇ ಪೋಲೀಸ್ ಪ್ರಾರ್ಥನೆ ಮಾಡುತ್ತಿದ್ದ ಪುರುಷರನ್ನು ಹಿಂಸಾತ್ಮಕವಾಗಿ ತಳ್ಳುವುದನ್ನು ಕಾಣಬಹುದು.
“ಇಂದು ನಡೆದ ಘಟನೆಯಲ್ಲಿ ಹಾಗೂ ವೀಡಿಯೊದಲ್ಲಿ ಕಾಣಿಸಿಕೊಂಡ ಪೊಲೀಸ್ ಪೋಸ್ಟ್ ಉಸ್ತುವಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಅಗತ್ಯ ಶಿಸ್ತು ಕ್ರಮವನ್ನೂ ತೆಗೆದುಕೊಳ್ಳಲಾಗುತ್ತಿದೆ ಎಂದು ದೆಹಲಿ ಉತ್ತರ ಉಪ ಪೊಲೀಸ್ ಆಯುಕ್ತ ಎಂ.ಕೆ.ಮೀನಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version