2:16 AM Wednesday 20 - August 2025

ವನ್ ಸೈಡ್ ಲವ್: ಯುವತಿಯನ್ನು ಮುಗಿಸಲು ಮನೆಗೆ ನುಗ್ಗಿದ | ಆದರೆ ನಡೆದದ್ದೇ ಬೇರೆ

08/02/2021

ಮುಂಬೈ: ಯುವತಿಯೋರ್ವಳನ್ನು ವನ್ ಸೈಡ್ ಲವ್ ಮಾಡಿದ ಯುವಕ. ಆಕೆ ಸಿಗುವುದಿಲ್ಲ ಎಂದು ತಿಳಿದಾಗ ಕ್ರೋಧಗೊಂಡಿದ್ದಾನೆ. ತನಗೆ ಸಿಗದವಳು ಯಾರಿಗೂ ಸಿಗಬಾರದು ಅಂತ ಸೈಲೆಂಟಾಗಿ ಯುವತಿಯನ್ನು ಹತ್ಯೆ ಮಾಡಲು ಸಂಚುರೂಪಿಸಿದ್ದಾನೆ. ಆದರೆ  ಆತನ ಯೋಜನೆ ಎಲ್ಲ ಉಲ್ಟಾಪಲ್ಟಾ ಆಗಿ ಬಿಟ್ಟಿದೆ.

ಮಹಾರಾಷ್ಟ್ರದ ಮುಂಬೈನಲ್ಲಿ ಈ ಘಟನೆ ನಡೆದಿದೆ. ಮುಂಬೈನ ಮೇಘವಾಡಿ ಪ್ರದೇಶದ ನಿವಾಸಿಯಾಗಿದ್ದ ಯುವತಿಗೆ ಯುವಕನೋರ್ವನ ಪರಿಚಯವಾಗಿತ್ತು. ಯುವತಿ ಹಾಗೂ ಆತನ ಜೊತೆಗೆ ಸ್ನೇಹ ಇತ್ತು. ಆದರೆ ಯುವಕ ಆಕೆಯನ್ನು ಪ್ರೀತಿಸಲು ಆರಂಭಿಸಿದ್ದಾನೆ. ಅದರಂತೆ, ಆತ ಯುವತಿಯ ಪೋಷಕರ ಬಳಿಯಲ್ಲಿ ತನಗೆ ಯುವತಿಯನ್ನು ಮದುವೆ ಮಾಡಿಕೊಡಿ ಎಂದು ಕೇಳಿದ್ದಾನೆ.

ಆದರೆ ಇದಕ್ಕೆ ಯುವತಿಯ ತಂದೆ-ತಾಯಿ ಒಪ್ಪಲಿಲ್ಲ. ಫೆ.6ರಂದು ಯುವತಿಯ ಮನೆಯವರು ಯುವತಿ ಒಬ್ಬಳನ್ನೇ ಮನೆಯಲ್ಲಿ ಬಿಟ್ಟು, ಹೊರಗಡೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲ ಎನ್ನುವುದು ತಿಳಿಯುತ್ತಿದ್ದಂತೆಯೇ ಯುವಕ ಕೆಟ್ಟ ಕೆಲಸಕ್ಕೆ ಸ್ಕೆಚ್ ಹಾಕಿದ್ದಾನೆ.

ಒಂದು ಬಾಟಲಿ ಪೆಟ್ರೋಲ್ ಹಿಡಿದು ಯುವತಿಯ ಮನೆಗೆ ನುಗ್ಗಿದ್ದ ಆತ ಯುವತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಯುವತಿಯ ಮೈಮೇಲೆ ಬೆಂಕಿ ಹತ್ತಿಕೊಂಡಿದ್ದು, ನೋವು ಸಂಕಟದಿಂದ ಯುವತಿಯು ಭಯಭೀತಳಾಗಿ ಬೆಂಕಿ ಹಚ್ಚಿದ ಯುವಕನನ್ನು ಅಪ್ಪಿಕೊಂಡಿದ್ದಾಳೆ.

ಇಬ್ಬರ ಮೈಮೇಲೆ ಬೆಂಕಿ ಹತ್ತಿಕೊಂಡು ಅವರ ಚೀರಾಡಿದ್ದು, ಈ ವೇಳೆ ಅಕ್ಕಪಕ್ಕದ ಮನೆಯವರು ಬಂದು ನೋಡಿದ್ದಾರೆ. ಎರಡೂ ದೇಹ ಬೆಂಕಿಯಲ್ಲಿ ಸುಟ್ಟು ನರಳಾಡುತ್ತಿರುವುರನ್ನು ನೋಡಿ ತಕ್ಷಣವೇ ಬೆಂಕಿ ಆರಿಸಿದ್ದಾರೆ.

ತಕ್ಷಣವೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಅಷ್ಟರಲ್ಲೇ ಯುವಕ ಸಾವನ್ನಪ್ಪಿದ್ದಾನೆ. ಯುವತಿಯ ಸ್ಥಿತಿ ಗಂಭೀರವಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ನರಳಾಡುತ್ತಿದ್ದಾಳೆ.

ಇತ್ತೀಚಿನ ಸುದ್ದಿ

Exit mobile version