11:15 PM Tuesday 14 - October 2025

ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದು ಐಫೋನ್, ಕೊರಿಯರ್ ಬಾಯ್ ನೀಡಿದ್ದು ಏನು ಗೊತ್ತಾ?

03/03/2021

ಬೀಜಿಂಗ್: ಮಹಿಳೆಯೊಬ್ಬರು ಆನ್ ಲೈನ್ ನಲ್ಲಿ ಐಫೋನ್ ಆರ್ಡರ್ ಮಾಡಿದರೆ, ಮನೆಗೆ ಮಾತ್ರ ಬೇರೆಯೇ ವಸ್ತು ಬಂದು ತಲುಪಿದೆ. ಇಂತಹದ್ದೊಂದು ವಿಚಿತ್ರ ಘಟನೆ  ಚೀನಾದಲ್ಲಿ ನಡೆದಿದೆ.

ಲಿಯು ಎಂಬ ಮಹಿಳೆಯೊಬ್ಬರು ಆನ್ ಲೈನ್ ವೆಬ್ ಸೈಟ್ ನ ಮೂಲಕ ಐಫೋನ್ 12 ಮ್ಯಾಕ್ಸ್ ಪ್ರೋ ಬುಕ್ ಮಾಡಿದ್ದಾರೆ. ಜೊತೆಗೆ 1,09,600 ರೂ.ಗಳನ್ನೂ ಪಾವತಿ ಮಾಡಿದ್ದಾರೆ. ಬಳಿಕ ಮಹಿಳೆಯ ಮನೆಗೆ ಪಾರ್ಸೆಲ್ ವೊಂದು ಬಂದಿದ್ದು, ಪಾರ್ಸೆಲ್ ಓಪನ್ ಮಾಡಿದಾಗ ಅದರಲ್ಲಿ ಒಂದು ಪ್ಯಾಕ್ ಮೊಸರು ಅಷ್ಟೇ ಇತ್ತು.

ಘಟನೆಯಿಂದ ಶಾಕ್ ಗೊಳಗಾದ ಮಹಿಳೆ ಲಂಗ್ ಎಂಬಾತನನ್ನು ಬಂಧಿಸಿದ್ದಾರೆ. ಈತ ಕೊರಿಯರ್ ತಲುಪಿಸುವ ವ್ಯಕ್ತಿಯಾಗಿದ್ದು, ಸಂಸ್ಥೆಯು ಕಳುಹಿಸಿದ ವಸ್ತು ಆಪಲ್ ಫೋನ್ ಎಂದು ತಿಳಿದ ಈತ ಫೋನ್ ನ್ನು ಕದ್ದು, ಪ್ಯಾಕ್ ನಲ್ಲಿ ಮೊಸರು ಇಟ್ಟು ಗ್ರಾಹಕಿಗೆ ನೀಡಿದ್ದಾನೆ.

ಈತ ತಾತ್ಕಾಲಿಕವಾಗಿ ಕೊರೊಯರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಈ ಸುದ್ದಿ ಚೀನಾದ್ಯಂತ ಹಬ್ಬಿದ್ದು, ಆನ್ ಲೈನ್ ಸಂಸ್ಥೆಗೆ ಮುಜುಗರ ಉಂಟಾಗಿದೆ.

chaina

whatsapp

ಇತ್ತೀಚಿನ ಸುದ್ದಿ

Exit mobile version