ಬಹಿರಂಗ ಪ್ರಚಾರಕ್ಕೆ ತೆರೆ: ಕೊನೆ ದಿನ ಸೋಮಣ್ಣ, ಸಿದ್ದು, ವಾಟಾಳ್ ಅಬ್ಬರ!!

ಚಾಮರಾಜನಗರ: ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿದ್ದು ಕೊನೆ ದಿನದ ಪ್ರಚಾರದಲ್ಲಿ ಸಿದ್ದರಾಮಯ್ಯ ಹಾಗೂ ಸೋಮಣ್ಣ ಅಬ್ಬರಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿ ಇಂದು ಗುಂಡ್ಲುಪೇಟೆಯಲ್ಲಿ ಕೈ ಅಭ್ಯರ್ಥಿ ಗಣೇಶ್ ಪ್ರಸಾದ್ ಪರ ಮತಯಾಚನೆ ಮಾಡಿ ಕಮಲಪಡೆ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಸಿದ್ದರಾಮಯ್ಯ ಅವರಂತು ಮೋದಿ ವಿರುದ್ಧ ವಾಗ್ದಾಳಿ ನಡೆಸಿ, ಪ್ರಧಾನಿ ಇಲ್ಲಿಗೆ ಬಂದು ಭಾವನಾತ್ಮಕವಾಗಿ ಮಾತನಾಡಿ ಹೋಗುತ್ತಾರೆ.ಆದರೆ, 40% ಲಂಚದ ಬಗ್ಗೆ ಅವರೆಲ್ಲೂ ಮಾತನಾಡಲ್ಲ, ದೂರು ಕೊಟ್ಟರೂ ಕ್ರಮ ತೆಗೆದುಕೊಂಡಿಲ್ಲ, ಲಂಚ ತಿನ್ನಲ್ಲ -ತಿನ್ನಲು ಬಿಡಲ್ಲ ಎನ್ನುತ್ತಾರೆ ಇಲ್ಲಿ ಬಿಜೆಪಿ ಅವರು 40% ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಸರಕಾರ ಭ್ರಷ್ಟವಾಗಿದ್ದು ದುರಾಡಳಿತ ನಿಷ್ಕ್ರಿಯತೆ, ಜನ ವಿರೋಧಿ ನೀತಿಗಳಿಂದ ಬೇಸತ್ತು ಹೋಗಿರುವ ಜನತೆ ಬದಲಾವಣೆಯನ್ನು ಬಯಸಿದ್ದಾರೆ ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೊಗೆಯುವ ಸಂಕಲ್ಪ ಮಾಡಿದ್ದಾರೆ ಹಾಗಾಗಿ ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರನಷ್ಟೆ ಸತ್ಯ ಎಂದು ಭವಿಷ್ಯ ನುಡಿದರು.
ಗಣೇಶ್ ಪ್ರಸಾದ್ ಗೆ ಕೊಡುವ ಮತ ಸಿದ್ದರಾಮಯ್ಯನಿಗೆ ಕೊಟ್ಟಂತೆ ಗಣೇಶ್ ಪ್ರಸಾದ ಗೆಲುವು ಸಿದ್ದರಾಮಯ್ಯನ ಗೆಲುವು ಆದ್ದರಿಂದ ತಪ್ಪದೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಮನವಿ ಮಾಡಿದರು.
ಹಾಲಿ ಶಾಸಕ ನಿರಂಜನ್ ಕುಮಾರ್ ಕ್ಷೇತ್ರಕ್ಕೆ ಏನು ಮಾಡಿಲ್ಲ ನನ್ನ ಮುಖ್ಯ ಮಂತ್ರಿ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ಬಡವರಿಗೆ ನೀಡಿದೆ ಬಿಜೆಪಿ ಸರಕಾರ ಎಷ್ಟು ಮನೆಗಳನ್ನು ನೀಡಿದೆ ಎಂದು ಪ್ರಶ್ನೆ ಮಾಡಿದರು.
ವಸತಿ ಸಚಿವ ವಿ.ಸೋಮಣ್ಣನ ಹತ್ತಿರ ಬಡ ಮಹಿಳೆ ನಿವೇಶನ ಕೇಳಿದರೆ ಅವಳ ಹಲ್ಲೆ ಮಾಡಿದ ಸಚಿವರಿಂದ ಏನು ನಿರೀಕ್ಷಿಸಲು ಸಾಧ್ಯ ಎಂದು ಕಿಡಿಕಾರಿದರು.
ಸೋಮಣ್ಣ ಕೊನೆ ಆಟ: ವರುಣಾದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ ತನಕ ಕೊನೆ ಹಂತದ ಪ್ರಚಾರ ನಡೆಸಿದ ಬಳಿಕ ಚಾಮರಾಜನಗರಕ್ಕೆ ಎಂಟ್ರಿ ಕೊಟ್ಟು ಚಾಮರಾಜನಗರದ ವಿವಿಧ ಬಡಾವಣೆಗಳಲ್ಲಿ ಮತಬೇಟೆ ನಡೆಸಿದರು.
ಕೊಳದ ಗಣಪತಿ ದೇವಾಲಯದದಿಂದ ಆರಂಭಗೊಂಡ ಸೋಮಣ್ಣ ಪ್ರಚಾರ ಅಂಗಡಿ ಬೀದಿ, ಭುವನೇಶ್ವರಿ ವೃತ್ತ,
ಸಂತೇಮರಹಳ್ಳಿ ವೃತ್ತ, ಆದಿಶಕ್ತಿ ದೇವಾಲಯ ಸೇರಿದಂತೆ ಚಾಮರಾಜನಗರ ಜಿಲ್ಲಾಕೇಂದ್ರದ್ಯಾಂತ ಬಿರುಸಿನ ಪ್ರಚಾರ ನಡೆಸಿದರು.
ರೋಡ್ ಶೋ ನಡೆಸಿದ ವಾಟಾಳ್:
ಚಾಮರಾಜನಗರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಇಂದು ಆಟೋ ಚಾಲಕರ ಜೊತೆ ರೋಡ್ ಶೋ ನಡೆಸಿ ಗಮನ ಸೆಳೆದರು.
ಸಂತೇಮರಹಳ್ಳಿ ವೃತ್ತದಲ್ಲಿ ಆರಂಭಗೊಂಡ ವಾಟಾಳ್ ರೋಡ್ ಶೋ ಡಿವಿಏಷನ್ ರಸ್ತೆ, ಬಿ.ರಾಚಯ್ಯ ಜೋಡಿ ರಸ್ತೆ, ಷರೀಪ್ ಸರ್ಕಲ್, ಗುಂಡ್ಲುಪೇಟೆ ವೃತ್ತ, ಅಂಗಡಿ ಬೀದಿಗಳಲ್ಲಿ ಮಗಳ ಜೊತೆ ರೋಡ್ ಶೋ ನಡೆಸಿ ತಮಗೊಂದು ಮತ ನೀಡುವಂತೆ ಮನವಿ ಮಾಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw