ಬಾಣಂತಿ ಊರಿಗೆ ಬಂದ್ರೆ ದೇವರಿಗೆ ಆಗಲ್ಲ ಅಂತ, ಊರಿನಿಂದ ಹೊರಗಿಟ್ಟರು!

ಜನ್ಮ ನೀಡುವ ತಾಯಿಗೆ ಪ್ರಪಂಚದಲ್ಲೇ ಉನ್ನತ ಸ್ಥಾನವಿದೆ. ಆದ್ರೆ ಇಲ್ಲೊಂದೆಡೆ ಬಾಣಂತಿ ಮಹಿಳೆಯೊಬ್ಬರನ್ನು ಊರಿನಿಂದ ಆಚೆ ಇಟ್ಟ ಅಮಾನವೀಯ ಘಟನೆ ನಡೆದಿದೆ.
ಬಾಣಂತಿಯರು ಬಂದ್ರೆ ಸೂತಕ ಅಂತೆ, ನಮ್ಮ ದೇವ್ರಿಗೆ ಸೂತದವರು ಬಂದ್ರೆ ಆಗಲ್ಲ ಅನ್ನೋ ನೆಪದಲ್ಲಿ ಊರ ಹೊರಗಿನ ಗುಡಿಸಿನಲ್ಲಿ ಬಾಣಂತಿ ಮಗು ಏಕಾಂಕಿಯಾಗಿ ವಾಸವಿಟ್ಟು ಅನಾಗರಿಕತೆ ಮೆರೆಯಲಾಗಿದೆ.
ತುಮಕೂರು ಸಮೀಪದ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಈ ಮೌಢ್ಯಾಚರಣೆ ನಡೆದಿದೆ.
5 ದಿನಗಳ ಹಿಂದೆ ವಸಂತ ಎಂಬ ತಾಯಿಯೊಬ್ಬರು ಅವಳಿ ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಸಂದರ್ಭದಲ್ಲಿ ಗಂಡು ಮಗುವ ಸಾವನ್ನಪ್ಪಿತ್ತು. ಹೆರಿಗೆ ಮುಗಿಸಿ ವಾಪಸ್ ಬಂದ ವಸಂತ, ತನ್ನ ಇನ್ನೊಂದು ಮಗು(ಹೆಣ್ಣು ಮಗು)ವಿನೊಂದಿಗೆ ಗೂಡಿನಂತಹ ಸಣ್ಣ ಗುಡಿಸಲಿನಲ್ಲಿ ವಾಸವಿರುವಂತಾಗಿದೆ. ಗ್ರಾಮದ ದೇವರಾದ ಜುಂಜಪ್ಪ ಹಾಗೂ ಯತ್ತಪ್ಪ ದೇವರಿಗೆ ಬಾಣಂತಿಯರು ಊರಿಗೆ ಬಂದ್ರೆ ಆಗಲ್ಲ ಅನ್ನೋ ಮೂಢನಂಬಿಕೆಯ ಆಚರಣೆ ಇಲ್ಲಿ ಆಚರಿಸಲಾಗುತ್ತಿದೆ.
ನಮ್ಮ ದೇವರಿಗೆ ಸೂತಕ ಆಗಲ್ಲ ಹಾಗಾಗಿ ನಾವು ಒಳಗೆ ಬಿಟ್ಟುಕೊಳ್ಳುವುದಿಲ್ಲ ಎಂದು ಗೊಲ್ಲ ಸಮುದಾಯದವರು ಹೇಳುತ್ತಿದ್ದಾರೆ. ಹಿಂದಿನಿಂದಲೂ ಈ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂತಹ ಆಚರಣೆಗಳು ಇಂದಿಗೂ ಜೀವಂತವಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಬಾಣಂತಿಯರಿಗೆ ಸಂಕಷ್ಟ ತಂದೊಡ್ಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw