6:57 PM Tuesday 2 - September 2025

ಮುಚ್ಚುವ ಸ್ಥಿತಿಯಲ್ಲಿದ್ದ ಶಾಲೆಯನ್ನು ದತ್ತು ತೆಗೆದುಕೊಂಡು ಮಾದರಿಯಾದ ಚಿಣ್ಣರ ಲೋಕ ಸೇವಾ ಬಂಧು ಬಂಟ್ವಾಳ ಸಂಸ್ಥೆ

goverment
31/05/2023

  • ಶಂಶೀರ್ ಬುಡೋಳಿ

ಆ ಶಾಲೆ ಮುಚ್ಚುವ ಸ್ಥಿತಿಯಲ್ಲಿತ್ತು. ಆ ಊರಿನ ಜನ್ರಿಗೆ ತಮ್ಮ ಶಾಲೆಯನ್ನು ಉಳಿಸುವುದೇ ದೊಡ್ಡ ಚಿಂತೆಯಾಗಿತ್ತು. ಅತ್ತ ಮಕ್ಕಳಿಗೂ ಕೂಡಾ ತಮ್ಮ ವಿದ್ಯಾಭ್ಯಾಸದ ಚಿಂತೆ. ಈ ಮಧ್ಯೆ ಆ ಒಂದು ಸಂಸ್ಥೆಯು ಆಪತ್ಬಾಂಧವನಾಗಿ ಬಂದು ಆ ಶಾಲೆಯನ್ನು ದತ್ತು ತೆಗೆದುಕೊಂಡು ಫ್ರಿ ಫ್ರಿ ಆಗಿ ಶಿಕ್ಷಣ ನೀಡಲು ಮುಂದೆ ಬಂದಿದೆ.

ಹೌದು. ರಾಜ್ಯದ ಎಲ್ಲೆಲ್ಲೂ ಶಾಲಾ ಪ್ರಾರಂಭೋತ್ಸವದ ಸಂಭ್ರಮ. ಅದ್ರಲ್ಲೂ ಮಾದರಿ ಕಾರ್ಯ ಎಂಬಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿಣ್ಣರ ಲೋಕ ಸೇವಾ ಬಂಧು ಬಂಟ್ವಾಳ ಸಂಸ್ಥೆಯು ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಬೋಳಂತೂರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡು ಮಾದರಿಯಾಗಿದೆ. ಮಕ್ಕಳಿಗೆ ಪೂರ್ಣ ರೀತಿಯ ಸಹಕಾರವನ್ನು, ವ್ಯವಸ್ಥೆಯನ್ನು ಮಾಡೋಕೇ ಆಗದ ಕಾರಣ ಈ ಸಂಸ್ಥೆಯು ಈ ಶಾಲೆಯನ್ನು ದತ್ತು ತೆಗೆದುಕೊಂಡಿದೆ.

ಚಿಣ್ಣರ ಲೋಕಸೇವಾ ಬಂಧು ಈಗಾಗಲೇ ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಹಿನ್ನೆಲೆಯಲ್ಲಿ ಮಕ್ಕಳಿಗೆ ಪೂರ್ಣ ರೀತಿಯ ವ್ಯವಸ್ಥೆಯನ್ನು ಮಾಡಲು ಈ ಶಾಲೆಯನ್ನು ದತ್ತು ತೆಗೆದುಕೊಂಡಿದೆ. ಮೂಲಭೂತ ಸೌಕರ್ಯಗಳ ಜೊತೆ ಅದಕ್ಕೆ ಬೇಕಾದಂತೆ ಟೀಚರ್ಸ್ ಗಳ ವ್ಯವಸ್ಥೆಯನ್ನು ಮಾಡಿದೆ. ಇವತ್ತು ಶಾಲಾ ಪ್ರಾರಂಭೋತ್ಸವ ಆಗಿದ್ದರಿಂದ ಈ ಕಾರ್ಯಕ್ರಮ ತುಂಬಾ ವಿಜೃಂಭಣೆಯಿಂದ ನಡೆಯಿತು. ಮೆರವಣಿಗೆಯೊಂದಿಗೆ ಮಕ್ಕಳಿಗೆ ಸ್ವಾಗತ ಕೋರಲಾಯಿತು. ಊರ ಪರವೂರ ನಿವಾಸಿಗಳ, ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಿಂದ ಇವತ್ತು ಶಾಲೆ ಪ್ರಾರಂಭವಾಗಿದೆ.

ಅಂದಹಾಗೇ ಈ ಶಾಲೆಯಲ್ಲಿ ಮೊದಲು ಮಕ್ಕಳ ಸಂಖ್ಯೆ ಕಡಿಮೆ ಇತ್ತು. ಇದೀಗ ಇಲ್ಲಿ ಮಕ್ಕಳ ಸಂಖ್ಯೆ 85 ಕ್ಕಿಂತಲೂ ಹೆಚ್ಚಾಗಿದ್ದಾರೆ. ಇನ್ನು ಇಲ್ಲಿನ ಮಕ್ಕಳಿಗೆ ಚಿಣ್ಣರ ಲೋಕ ಸಂಸ್ಥೆಯು ಉಚಿತವಾಗಿ ಸಮವಸ್ತ್ರ, ಪುಸ್ತಕ ನೀಡಿದೆ. ಅದೇ ರೀತಿ ದೂರದಿಂದ ಬರುವ ಮಕ್ಕಳಿಗೆ ಉಚಿತವಾಗಿ ಸಾರಿಗೆ ವ್ಯವಸ್ಥೆ ಮಾಡಿದೆ. ಇನ್ನು ಈ ಶಾಲೆಯಲ್ಲಿ ಮೊದಲು ಮೂರು ಶಿಕ್ಷಕರು ಇದ್ರು. ಇದೀಗ ಈ ಸಂಸ್ಥೆ ವತಿಯಿಂದ ಹೆಚ್ಚುವರಿಯಾಗಿ ಒಂಭತ್ತು ಶಿಕ್ಷಕರನ್ನು ನೇಮಿಸಲಾಗಿದೆ. ಪಠ್ಯದ ಜೊತೆಗೆ ಮಕ್ಕಳಿಗೆ ಯಕ್ಷಗಾನ, ಚಿತ್ರಕಲೆ, ಶಾಸ್ತ್ರೀಯ ಸಂಗೀತ ಹೀಗೆ ವಿವಿಧ ಪಠ್ಯೇತರ ಶಿಕ್ಷಣವನ್ನು ಕೂಡ ಮಕ್ಕಳಿಗೆ ಉಚಿತವಾಗಿ ಕೊಡಲಾಗ್ತಿದೆ. ಅಂದ್ರೆ ಇಲ್ಲಿ ಎಲ್ಲವೂ ಫ್ರಿಯಾಗಿ ಮಕ್ಕಳಿಗೆ ಶಿಕ್ಷಣ ಸಿಗುತ್ತದೆ.

ಯಾವ ಮಕ್ಕಳು ಇಲ್ಲಿ ದುಡ್ಡು ಕೊಡಬೇಕಾಗಿಲ್ಲ. ಇನ್ನು ಸುಮಾರು 1.30 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣ ಮಾಡುವ ಯೋಜನೆ ಇದೆ. ಸರ್ಕಾರದ ನಿಯಮದ ಪ್ರಕಾರ ಈ ಸಂಸ್ಥೆಯು ಐದು ವರ್ಷಗಳ ಕಾಲ ಈ ಶಾಲೆಯನ್ನು ದತ್ತು ತೆಗೆದುಕೊಂಡಿದೆ. ಇಲ್ಲಿ ಒಂದರಿಂದ ಎಂಟನೇ ತರಗತಿಯವರಿಗೆ ಇಂಗ್ಲೀಷ್ ಹಾಗೂ ಕನ್ನಡ ಮಾಧ್ಯಮದಲ್ಲಿ ತರಗತಿಗಳು ಇದೆ.

ಇಂಗ್ಲೀಷ್ ಸ್ಪೀಕಿಂಗ್ ಶಾಸ್ತ್ರೀಯ ಸಂಗೀತ ಹೀಗೆ ಎಲ್ಲವೂ ಇಲ್ಲಿ ಉಚಿತವಾಗಿ ದೊರೆಯುತ್ತದೆ. ಒಟ್ಟು 12 ಮಂದಿ ಶಿಕ್ಷಕರು ಇಲ್ಲಿದ್ದಾರೆ. ಒಟ್ಟಿನಲ್ಲಿ ಚಿಣ್ಣರ ಲೋಕ ಸೇವಾ ಬಂಧು ಬೋಳಂತೂರಿನ ಮಕ್ಕಳ ಪಾಲಿಗೆ ಆಪತ್ಬಾಂಧವ ಆಗಿದೆ. ಮುಚ್ಚುವ ಸ್ಥಿತಿಯಲ್ಲಿರೋ ಇಂತಹ ಅನೇಕ ಸರ್ಕಾರಿ ಶಾಲೆಗಳನ್ನು ಉಳಿಸಲು ನಾವೆಲ್ಲಾ ಪಣ ತೊಡಬೇಕಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version