12:22 AM Thursday 21 - August 2025

ಆಕ್ಸ್ ಫರ್ಡ್ ಚಾನ್ಸಲರ್ ಹುದ್ದೆಗೆ ಜೈಲಿನಿಂದಲೇ ಅರ್ಜಿ ಸಲ್ಲಿಸಿದ ಪಾಕಿಸ್ತಾನದ ಮಾಜಿ ಪ್ರಧಾನಿ..!

20/08/2024

ಜೈಲಿನಲ್ಲಿರುವ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಮುಂದಿನ ಕುಲಪತಿಯಾಗಲು ಅರ್ಜಿ ಸಲ್ಲಿಸಿದ್ದಾರೆ ಎಂದು ಪಿಟಿಐ ಪ್ರಕಟಿಸಿದೆ. ಸದ್ಯ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಖಾನ್, ಕಾನೂನು ತೊಡಕುಗಳ ಹೊರತಾಗಿಯೂ ಪ್ರತಿಷ್ಠಿತ ಸ್ಥಾನವನ್ನು ತನ್ನದಾಗಿಸಲು ಬಯಸುತ್ತಿದ್ದಾರೆ.

ಇಮ್ರಾನ್ ಖಾನ್ ಅವರ ಇತ್ತೀಚಿನ ಪ್ರಯತ್ನದ ಬಗ್ಗೆ ಪಕ್ಷವು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ನಲ್ಲಿ ಮಾಹಿತಿ ನೀಡಿದೆ. ಆಕ್ಸ್ ಫರ್ಡ್ ಹಳೆಯ ವಿದ್ಯಾರ್ಥಿಯಾಗಿರುವ ಪಿಟಿಐ ಮುಖ್ಯಸ್ಥರು ತಮ್ಮ ಪಕ್ಷದ ಲಂಡನ್ ಮೂಲದ ವಕ್ತಾರ ಸೈಯದ್ ಜುಲ್ಫಿಕರ್ ಬುಖಾರಿ ಮೂಲಕ ಪ್ರತಿಷ್ಠಿತ ವಿಶ್ವವಿದ್ಯಾಲಯದ ಮುಂದಿನ ಕುಲಪತಿಯಾಗಲು ತಮ್ಮ ವಿನಂತಿಯನ್ನು ಔಪಚಾರಿಕವಾಗಿ ಸಲ್ಲಿಸಿದ್ದಾರೆ ಎಂದು ಪೋಸ್ಟ್ ಹೇಳಿದೆ.

“ಪಾಕಿಸ್ತಾನದ ರಾಷ್ಟ್ರೀಯ ನಾಯಕ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನದ ಅತಿದೊಡ್ಡ ರಾಜಕೀಯ ಪಕ್ಷ ಪಿಟಿಐ ಸ್ಥಾಪಕ. ಮತ್ತು ಅಧ್ಯಕ್ಷ, ಕ್ರಿಕೆಟ್ ದಂತಕಥೆಯಾಗಿರುವ ಇವರು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ. ಹೀಗಾಗಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಸ್ಪರ್ಧಿಸುತ್ತಿದ್ದಾರೆ ಎಂದು ಪಿಟಿಐ ಪೋಸ್ಟ್ ತಿಳಿಸಿದೆ.

‘ಒಂದು ವರ್ಷಕ್ಕೂ ಹೆಚ್ಚು ಕಾಲ ಕಾನೂನುಬಾಹಿರವಾಗಿ ಜೈಲಿನಲ್ಲಿದ್ದರೂ ಖಾನ್ ತಮ್ಮ ತತ್ವಗಳು ಮತ್ತು ಕಾರಣಗಳಲ್ಲಿ ದೃಢವಾಗಿ ಉಳಿದಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅರ್ಜಿಯನ್ನು ಔಪಚಾರಿಕವಾಗಿ ಸಲ್ಲಿಸಲಾಗಿದೆ ಎಂದು ಜುಲ್ಫಿ ಬುಖಾರಿ ದೃಢಪಡಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version