6:21 PM Wednesday 22 - October 2025

ಪುತ್ತೂರು: ಬೀಳ್ಕೊಡುಗೆ ಪಾರ್ಟಿಗೆ ಬಂದ ಯುವತಿಯ ಮೇಲೆ ಅತ್ಯಾಚಾರ

08/02/2021

ಪುತ್ತೂರು: ಬೀಳ್ಕೊಡುಗೆ ಪಾರ್ಟಿಗೆ ಬಂದ ಬ್ಯಾಂಕ್ ಉದ್ಯೋಗಿ ಯುವತಿಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಡಿಪ್ಪಾಡಿಯ ವಿಶ್ರಾಂತಿ ಗೃಹವೊಂದರಲ್ಲಿ ನಡೆದಿದೆ.

ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜಾಯಿಲಿನ್ ಪಿಂಟೋ ಎಂಬವರಿಗೆ ಅಂಡಮಾನ್ ಗೆ ವರ್ಗಾವಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಫೆ.5ರಂದು ರಾತ್ರಿ ಕೊಡಿಪ್ಪಾಡಿಯಲ್ಲಿರುವ ಆಕಾಶ್ ಸೆರಾವೋ ಎಂಬವರ ಮಾಲಕತ್ವದ ವಿಶ್ರಾಂತಿ ಗೃಹದಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿಯಲ್ಲಿ 17ರಿಂದ 20 ಜನರು ಭಾಗವಹಿಸಿದ್ದರು ಎನ್ನಲಾಗಿದೆ.

ಪಾರ್ಟಿ ಮುಗಿದ ಬಳಿಕ ಉಳಿದವರು  ತೆರಳಿದ್ದು, ರಾತ್ರಿ ಸಮಯವಾಗಿದ್ದರಿಂದ ಒಟ್ಟು ನಾಲ್ವರು ವಿಶ್ರಾಂತಿ ಗೃಹದಲ್ಲಿಯೇ ಉಳಿದುಕೊಂಡಿದ್ದಾರೆ. ಸಂತ್ರಸ್ತ ಯುವತಿ ಅಲ್ಲಿಯೇ ಇದ್ದ ರೂಮೊಂದರಲ್ಲಿ ಮಲಗಿದ್ದು, ಬೆಳಗ್ಗೆ ಸುಮಾರು 5 ಗಂಟೆಗೆ ಬ್ರಾಯಾನ್ ರಿಚರ್ಡ್ ಅಮನ್ನಾ ಎಂಬಾತ ಯುವತಿಯ ರೂಮ್ ಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version