ವಿಮಾನದಲ್ಲಿ ವಾಂತಿ ಮಾಡಿದ ಪ್ರಯಾಣಿಕ: ಪೈಲಟ್ ಏನ್ ಮಾಡಿದ ಗೊತ್ತಾ..?

06/09/2023

ಅಟ್ಲಾಂಟಾದಿಂದ ಬಾರ್ಸಿಲೋನಾಗೆ ಹೋಗುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರೊಬ್ಬರು ವಾಂತಿ ಮಾಡಿದ ಘಟನೆ ನಡೆದಿದೆ. ವಾಂತಿ‌ ಮಾಡಲು ಪ್ರಾರಂಭ ಮಾಡಿದಾಗ ತುರ್ತು ಪರಿಸ್ಥಿತಿ ಉದ್ಭವಿಸಿತು. ಹೀಗಾಗಿ ವಿಮಾನದೊಳಗೆ ಕೊಳಕು ಮತ್ತು ದುರ್ವಾಸನೆ ಹರಡಿತು. ಜನರು ಉಸಿರಾಡಲು ತೊಂದರೆ ಅನುಭವಿಸಿದರು. ಅಂತಿಮವಾಗಿ ಫ್ಲೈಟ್ ಕ್ಯಾಪ್ಟನ್ ವಿಮಾನ ನಿಲ್ದಾಣಕ್ಕೆ ಮರಳಲು ನಿರ್ಧರಿಸಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ. ಅಲ್ಲದೇ ಕೂಡಲೇ ಪ್ರಯಾಣಿಕನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು.

ಅಮೆರಿಕದ ಅಟ್ಲಾಂಟಾದಿಂದ ಬಾರ್ಸಿಲೋನಾಗೆ ವಿಮಾನ ಹೊರಟಿತ್ತು. ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ, ಇದ್ದಕ್ಕಿದ್ದಂತೆ ಪ್ರಯಾಣಿಕರೊಬ್ಬರು ವಾಂತಿ ಮಾಡಲು ಪ್ರಾರಂಭಿಸಿ ಸೀಟಿನಿಂದ ವಾಶ್ ರೂಮ್ ಕಡೆಗೆ ಓಡಿದರು. ಆದರೆ ಅವರ ವಾಂತಿ ನಿಲ್ಲಲಿಲ್ಲ.

ಪರಿಸ್ಥಿತಿಯನ್ನು ನಿಯಂತ್ರಿಸಲು, ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್ ಸೆಂಟರ್ ನೊಂದಿಗೆ ಮಾತನಾಡಿದರು. ವಿಮಾನದಲ್ಲಿ ಜೈವಿಕ ರೋಗ ಹರಡುವ ಅಪಾಯವಿದೆ ಎಂದು ಹೇಳಿದರು. ನಮ್ಮಲ್ಲಿ ಅತಿಸಾರದಿಂದ ಬಳಲುತ್ತಿರುವ ಪ್ರಯಾಣಿಕರಿದ್ದಾರೆ. ಆದ್ದರಿಂದ ನಾವು ಅಟ್ಲಾಂಟಾಗೆ ಹಿಂತಿರುಗಬೇಕೆಂದು ಅವರು ಬಯಸುತ್ತಾರೆ ಎಂದು ಮಾಹಿತಿ ನೀಡಿದರು.

ವಿಮಾನದಲ್ಲಿದ್ದ ಫ್ಲೈಟ್ ಸಿಬ್ಬಂದಿ ವಿಮಾನ ಇಳಿಯುವ ಮೊದಲು ಕೊಳಕನ್ನು ಸ್ವಚ್ಛಗೊಳಿಸಲು ಪ್ರಯತ್ನಿಸಿದರು. ತುರ್ತು ಭೂಸ್ಪರ್ಶ ಮಾಡಿದ ನಂತರ ವಿಮಾನವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಯಿತು.

ಇತ್ತೀಚಿನ ಸುದ್ದಿ

Exit mobile version