ಏಕಾಏಕಿ ನನ್ನ ಮೇಲೆ 10—15 ಜನ ಬಿದ್ದರು: ಕಣ್ಣು ತೆರೆದು ನೋಡಿದ್ರೆ ಮೃತದೇಹಗಳ ರಾಶಿ: ರೈಲು ದುರಂತವನ್ನು ವಿವರಿಸಿದ ಪ್ರಯಾಣಿಕ

odisha 1
03/06/2023

ಕೆಲವು ಕ್ಷಣಗಳಿಗಿಂತ ಮೊದಲು ಎಲ್ಲವೂ ಸರಿಯಾಗಿತ್ತು. ಪ್ರಯಾಣಿಕರು ಹಾಯಾಗಿ ಪ್ರಯಾಣಿಸುತ್ತಿದ್ದರು, ಪುಟ್ಟ ಮಕ್ಕಳ ಕಿಲಕಿಲ ನಗು, ದೊಡ್ಡವರು ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದರು. ಇನ್ನು ಕೆಲವರು ಕಣ್ಣು ಮುಚ್ಚಿ ನೆಮ್ಮದಿಯಿಂದ ಮಲಗಿದ್ದರು.

ಇದ್ದಕ್ಕಿದ್ದ ಹಾಗೆ ಒಂದೇ ಬಾರಿಗೆ ಭೂಕಂಪನ ಸೃಷ್ಟಿಯಾದ ಅನುಭವ, ಕೆಲವೇ ಕ್ಷಣಗಳಲ್ಲಿ ಏನಾಗುತ್ತಿದೆ ಎನ್ನುವುದು ತಿಳಿಯುವುದರೊಳಗೆ ಏಕಾಏಕಿ ರೈಲಿನೊಳಗೆ ಎಲ್ಲರೂ ಚೆಲ್ಲಾಪಿಲ್ಲಿಯಾಗಿದ್ದರು. ರಕ್ತ ಸಿಕ್ತವಾಗಿದ್ದ ಮೃತದೇಹಗಳನ್ನು ಕಂಡು ರೈಲಿನಲ್ಲಿ ಬದುಕಿದ್ದವರು ಬೆಚ್ಚಿ ಬಿದ್ದಿದ್ದರು. ಮಕ್ಕಳ ಕಿಲಕಿಲ ನಗು ನಿಂತು ಹೋಗಿತ್ತು. ಎಲ್ಲೆಲ್ಲೂ ಕೂಗು, ಆ್ಯಂಬುಲೆನ್ಸ್ ನ ಸೈರನ್ ಗಳು ಕೇಳುತ್ತಿದ್ದವು…

ಇದು… ಒಡಿಶಾದ ಭೀಕರ ರೈಲು ಅಪಘಾತವನ್ನು ಅಪಘಾತದಲ್ಲಿ ಬದುಕುಳಿದವರು ವಿವರಿಸಿದ ರೀತಿ ಇದು. ರೈಲು ಹಳಿ ತಪ್ಪಿದಾಗ ಎಚ್ಚರಗೊಂಡೆ. ನನ್ನ ಮೇಲೆ ಏಕಾಏಕಿ 10–15 ಮಂದಿ ಬಿದ್ದರು. ಹೊರಗೆ ಬಂದು ನೋಡಿದರೆ ಜನರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೈಕಾಲುಗಳು ಚೆಲ್ಲಾಪಿಲ್ಲಿಯಾಗಿದ್ದವು, ಇಡೀ ಸ್ಥಳವೇ ರಕ್ತಸಿಕ್ತವಾಗಿತ್ತು.

ಕೆಲವರ ಮುಖವೇ ವಿರೂಪಗೊಂಡಿತ್ತು ಎಂದು ಘಟನೆಯ ಬಗ್ಗೆ ಪ್ರಯಾಣಿಕರೊಬ್ಬರು ವಿವರಿಸಿದರು.
ರೂಪಂ ಬ್ಯಾನರ್ಜಿ ಅವರು, ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ನೆರವಿಗೆ ಧಾವಿಸಿದರು. ಬೋಗಿಗಳ ಮಧ್ಯೆ ಸಿಲುಕಿದ ಜನರನ್ನು ಹೊರಗೆಳೆಯುವುದು ಮಾತ್ರವಲ್ಲದೆ ನಮಗೆಲ್ಲ ನೀರು ನೀಡಿ ಉಪಚರಿಸಿದರು. ಗ್ಯಾಸ್‌ ಕಟರ್‌ ಬಳಸಿ ಬೋಗಿಗಳು ಮತ್ತು ಶೌಚಾಲಯಗಳ ಬಾಗಿಲು ತೆರೆದು ರಕ್ಷಣೆಗೆ ಮುಂದಾದರು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕ ತಿಳಿಸಿದರು.

ಶಾಲಿಮರ್–ಚೆನ್ನೈ ಕೋರಮಂಡಲ ಎಕ್ಸ್ಪ್ರೆಸ್ ರೈಲಿನ 10 ರಿಂದ 12 ಬೋಗಿಗಳು ಹಳಿತಪ್ಪಿ, ಎದುರಿನ ಹಳಿಗೆ ಬಿದ್ದು ದುರಂತ ಸಂಭವಿಸಿದೆ. ಇದೇ ವೇಳೆ ಬೆಂಗಳೂರು- ಹೌರಾ ಸೂಪರ್ಫಾಸ್ಟ್ ರೈಲು ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಈ ರೈಲಿನ ಮೂರು- ನಾಲ್ಕು ಬೋಗಿಗಳೂ ಹಳಿ ತಪ್ಪಿದವು. ಗೂಡ್ಸ್ ರೈಲು ಕೂಡಾ ಈ ದುರಂತದಲ್ಲಿ ಅಪಘಾತಕ್ಕೀಡಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ

Exit mobile version