ಜನ ನನ್ನ ಕೈ ಹಿಡಿಯಲು ಸಿದ್ಧರಿದ್ದಾರೆ, ಪಕ್ಷ ಕೈಬಿಡುವುದಿಲ್ಲ ಅನ್ನೋ ನಂಬಿಕೆ ಇದೆ: ಸಂಸದ ಪ್ರತಾಪ್‌ ಸಿಂಹ

prathap simha
10/03/2024

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಜನರು ನನ್ನ ಕೈ ಹಿಡಿಯಲು ಸಿದ್ಧವಿದ್ದಾರೆ. ಪಕ್ಷ ನನ್ನ ಕೈ ಬಿಡುವುದಿಲ್ಲ ಎಂಬ ನಂಬಿಕೆ ಇದೆ ಎಂದು ಮೈಸೂರು—ಕೊಡಗು ಕ್ಷೇತ್ರದ ಹಾಲಿ ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

ಈ ಬಾರಿ ಪ್ರತಾಪ್‌ ಸಿಂಹ ಅವರಿಗೆ ಟಿಕೆಟ್‌ ಕೈತಪ್ಪಲಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು,  ಸಂಸದರ ಟಿಕೆಟ್‌ ನಿರ್ಧರಿಸುವುದು ಜನರು, ಅವರಿಂದ ಬರುವ ಪ್ರತಿಕ್ರಿಯೆ, ನಮ್ಮ ಪರ್ಫಾಮೆನ್ಸ್‌ ನೋಡಿ ಟಿಕೆಟ್‌ ನೀಡಲಾಗುತ್ತದೆ. ಜನರು ಖುಷಿಯಾಗಿದ್ದಾರೆ ಅಂದ್ರೆ, ಮೇಲಿನವರೂ ಅದೇ ನಿರ್ಧಾರ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಮೈಸೂರು—ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಗೆದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೀಟು ಅಲುಗಾಡುತ್ತದೆ. ಹೀಗಿರುವಾಗ ನಮ್ಮ ಪಕ್ಷದವರು ಕಾಂಗ್ರೆಸ್‌ ಗೆ ಹೇಗೆ ಬೆಂಬಲ ನೀಡುತ್ತಾರೆ ಎಂದು ಪ್ರತಾಪ್‌ ಸಿಂಹ ಪ್ರಶ್ನೆ ಮಾಡಿದರು.

ಮೈಸೂರಿನಲ್ಲಿ ನಾನು ಇಂತಹ ಕೆಲಸ ಮಾಡಿಲ್ಲ ಎಂದು ತೋರಿಸಲಿ, ಯಾರೋ ಒಂದಿಷ್ಟು ಜನ ಅಸೂಯೆಯಿಂದ ನನ್ನ ವಿರುದ್ಧ ಮಾತನಾಡುತ್ತಾರೆ, ಮೈಸೂರಿನಲ್ಲಿ ಯಾರೂ ಮಾಡಿರದಷ್ಟು ಅಭಿವೃದ್ಧಿ ಕೆಲಸಗಳನ್ನು ನಾನು ಮಾಡಿದ್ದೇನೆ, ಹಿಂದುತ್ವದ ಪರವಾಗಿಯೂ ಕಾರ್ಯನಿರ್ವಹಿಸಿದ್ದೇನೆ ಎಂದು ಅವರು ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version