ಟಿಪ್ಪು ಬೇಸಿಗೆ ಅರಮನೆಯ ಮೇಲೆ ಪಾತಕಿ ಲಾರೆನ್ಸ್ ಬಿಷ್ಣೋಯ್  ಹೆಸರು!

tippu
27/10/2025

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿಗಿರಿಧಾಮದ ಪ್ರಸಿದ್ಧ ಟಿಪ್ಪು ಬೇಸಿಗೆ ಅರಮನೆಯ ಮೇಲೆ ಅಂತಾರಾಷ್ಟ್ರೀಯ ಪಾತಕಿ ಲಾರೆನ್ಸ್ ಬಿಷ್ಣೋಯ್  ಹೆಸರು ಬರೆಯಲಾಗಿದೆ. ಇದು ಪ್ರವಾಸಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಲಾರೆನ್ಸ್ ಬಿಷ್ಣೋಯ್ ಹೆಸರಿನ ನಡುವೆ ಲವ್ ಸಿಂಬಲ್ ಬರೆಯಲಾಗಿದೆ. ಟಿಪ್ಪು ಬೇಸಿಗೆ ಅರಮನೆಯು ಪುರಾತತ್ವ ಇಲಾಖೆಗೆ ಸೇರಿದೆ. ಸದಾ ಜನಜಂಗುಳಿಯಿಂದ ತುಂಬಿ ತುಳುಕುವ ಮತ್ತು ಗಿರಿಧಾಮದ ಪ್ರವೇಶದಲ್ಲಿಯೇ ಇರುವ ಬೇಸಿಗೆ ಅರಮನೆಯ ಮೇಲೆ ಈ ಬರಹ ಬರೆದವರು ಯಾರು ಎನ್ನುವುದು ಚರ್ಚೆಗೆ ಒಳಗಾಗಿದೆ.

ನಂದಿಗಿರಿಧಾಮ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಈ ಬರಹದ ಮೇಲೆ ಬಣ್ಣ ಬಳಿದಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version