ಭಾರತದ ಬಹಿಷ್ಕಾರದಿಂದ ಮಾಲ್ಡೀವ್ಸ್‌ ಮೇಲೆ ಕೆಟ್ಟ ಪರಿಣಾಮ: ಮಾಜಿ ಅಧ್ಯಕ್ಷ ಮೊಹಮ್ಮದ್‌ ನಶೀದ್‌ ಹೇಳಿಕೆ

09/03/2024

ಮಾಲ್ಡೀವ್ಸ್‌ ಮೇಲೆ ಭಾರತದ ಬಹಿಷ್ಕಾರದಿಂದ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿದೆ ಎಂದು ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ ಮೊಹಮ್ಮದ್‌ ನಶೀದ್‌ ತಿಳಿಸಿದ್ದಾರೆ.

ಭಾರತ ಪ್ರವಾಸದಲ್ಲಿರುವ ನಶೀದ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಭಾರತ ಮತ್ತು ಮಾಲ್ಡೀವ್ಸ್ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಜಗಳದ ಕುರಿತು ಪ್ರತಿಸಿದರು. ಜೊತೆಗೆ ಮಾಲ್ಡೀವ್ಸ್‌ ಜನತೆಯ ಪರವಾಗಿ ಕ್ಷಮೆ ಕೇಳಿದರು.

ಇದು ಮಾಲ್ಡೀವ್ಸ್ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ನಾನು ಇದರ ಬಗ್ಗೆ ತುಂಬಾ ಚಿಂತಿತನಾಗಿದ್ದೇನೆ. ಭಾರತೀಯ ಪ್ರವಾಸಿಗರು ತಮ್ಮ ದೇಶಕ್ಕೆ ಬರುವುದನ್ನು ಮುಂದುವರಿಸಬೇಕೆಂದು ಮಾಲ್ಡೀವಿಯನ್ ಜನರು ಬಯಸುತ್ತಾರೆ. ನಾವು ಭಾರತೀಯರನ್ನು ಬಯಸುತ್ತೇವೆ. ಅವರ ರಜಾದಿನಗಳಲ್ಲಿ ಮಾಲ್ಡೀವ್ಸ್‌ಗೆ ಬರಬೇಕು. ನಮ್ಮ ಆತಿಥ್ಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದರು.

ನಾನು ನಿನ್ನೆ ರಾತ್ರಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದೇನೆ. ಪ್ರಧಾನಿ ಮೋದಿ ನಮಗೆಲ್ಲರಿಗೂ ಶುಭ ಹಾರೈಸಿದರು. ನಾನು ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲಿಗನಾಗಿದ್ದೀನಿ ಎಂದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version