ನಡುಗಿದ ಲಿಬರ್ಟಿ ಪ್ರತಿಮೆ: ಭೂಕಂಪದ ತೀವ್ರತೆಗೆ ಬೆಚ್ಚಿಬಿದ್ದ ಜನ

lebarty stachu
06/04/2024

ನ್ಯೂಯಾರ್ಕ್ ನಲ್ಲಿ ಶುಕ್ರವಾರ ಸಂಭವಿಸಿದ 4.8 ತೀವ್ರತೆಯ ಭೂಕಂಪಕ್ಕೆ ಲಿಬರ್ಟಿ ಪ್ರತಿಮೆ ಅಲುಗಾಡಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ನ್ಯೂಯಾರ್ಕ್ ನಲ್ಲಿ ಸಂಭವಿಸಿದ ಭೂಕಂಪವು ಕಳೆದ 5 ದಶಕಗಳಲ್ಲೇ ನಡೆದ ಮೂರನೇ ಅತಿದೊಡ್ಡ ಕಂಪನವಾಗಿದೆ.

ಭೂಕಂಪದ ಬಗ್ಗೆ ಮಾತನಾಡಿದ ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಇದನ್ನು “ಕಳೆದ ಶತಮಾನದಲ್ಲಿ ಪೂರ್ವ ಕರಾವಳಿಯಲ್ಲಿ ಸಂಭವಿಸಿದ ಅತಿದೊಡ್ಡ ಭೂಕಂಪಗಳಲ್ಲಿ ಒಂದಾಗಿದೆ” ಎಂದು ವಿವರಿಸಿದರು.

ಆದರೆ ಭೂಕಂಪದಿಂದ ಲಿಬರ್ಟಿ ಪ್ರತಿಮೆಗೆ ಯಾವುದೇ ದೊಡ್ಡ ಹಾನಿ ಆದ ಬಗ್ಗೆ ಯಾವುದು ವರದಿಯಾಗಿಲ್ಲ, ಆದರೆ ಈ ಪ್ರದೇಶದಲ್ಲಿ ವಾಸಿಸುವ ನಿವಾಸಿಗಳು ಭೂಕಂಪದಿಂದ ಭಯ ಭೀತರಾಗಿದ್ದಾರೆ.

ಇತ್ತೀಚಿನ ಸುದ್ದಿ

Exit mobile version