ಮಾರ್ಚ್ 4 ಮತ್ತು 5: ಸಂತ ಆಲೋಶಿಯಸ್ ಸಹೋದಯ ರಂಗಮಂದಿರದಲ್ಲಿ ಎರಡು ನಾಟಕಗಳ ಪ್ರದರ್ಶನ

drama
04/03/2024

ಮಂಗಳೂರು : ಆಯನ ನಾಟಕದ ಮನೆ ಮತ್ತು ರಂಗ ಅಧ್ಯಯನ ಕೇಂದ್ರ ಹಾಗೂ ಸಂತ ಆಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯ ಮಂಗಳೂರು ಸಹಭಾಗಿತ್ವದಲ್ಲಿ ಎರಡು ನಾಟಕ ಪ್ರದರ್ಶನವು ದಿನಾಂಕ 04-03-2024 ಮತ್ತು 05-03-2024ರಂದು ಸಂಜೆ 7-00 ಗಂಟೆಗೆ ಸಂತ ಆಲೋಶಿಯಸ್ ಸಹೋದಯ ರಂಗಮಂದಿರದಲ್ಲಿ ನಡೆಯಲಿದೆ.

ದಿನಾಂಕ 04-03-2024ರಂದು ಚಂದ್ರಶೇಖರ್ ಕೆ. ನಿರ್ದೇಶನದಲ್ಲಿ ಜಂಗಮ ಕಲೆಕ್ಟಿವ್ ಪ್ರಸ್ತುತ ಪಡಿಸುವ ಹೋರಾಟದ ಹಾಡುಗಳ ಹುಟ್ಟಿನ ಕಥನ ‘ಪಂಚಮಪದ’ ಮತ್ತು ದಿನಾಂಕ 05-03-2024ರಂದು ಶ್ರೀಜಿತ್ ಸುಂದರಂ ಬೆಂಗಳೂರಿನ ಪಯಣ ಪ್ರಸ್ತುತ ಪಡಿಸುವ ಮಂಗಳಮುಖಿಯರ ನಿಜ ಕನಸು ‘ತಲ್ಕಿ’ ನಾಟಕಗಳ ಪ್ರದರ್ಶನ ನಡೆಯಲಿದೆ.

ಸಭಾ ಕಾರ್ಯಕ್ರಮ ಇರುವುದಿಲ್ಲ, ಉಚಿತ ಪ್ರವೇಶ ಮತ್ತು 7 ಗಂಟೆಗೆ ಸರಿಯಾಗಿ ನಾಟಕ ಆರಂಭವಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version