ಬಿಜೆಪಿ ಮೈತ್ರಿ ಪಕ್ಷದ ಸದಸ್ಯ 500ರ ನೋಟಿನ ಹಾಸಿಗೆಯಲ್ಲಿ ಮಲಗಿರುವ ಫೋಟೋ ವೈರಲ್ !

ಗುವಾಹಟಿ: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಸ್ಸಾಂನಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ನ ರಾಜಕೀಯ ವ್ಯಕ್ತಿಯೊಬ್ಬರು 500 ರೂಪಾಯಿ ಮುಖಬೆಲೆಯ ಕಂತೆ ಕಂತೆ ನೋಟಿನ ಮೇಲೆ ಮಲಗಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯುಪಿಪಿಎಲ್ ಸದಸ್ಯ ಬೆಂಜಮಿನ್ ಬಾಸುಮತರಿಯ ಫೋಟೋ ವೈರಲ್ ಆಗಿದ್ದು, ಅರೆ ನಗ್ನ ಸ್ಥಿತಿಯಲ್ಲಿ 500 ರೂಪಾಯಿಗಳ ಕರೆನ್ಸಿ ನೋಟುಗಳ ರಾಶಿಯಿಂದ ಅಲಂಕರಿಸಲ್ಪಟ್ಟ ಹಾಸಿಗೆಯ ಮೇಲೆ ಬೆಂಜಮಿನ್ ಮಲಗಿರುವುದು ಕಂಡು ಬಂದಿದೆ.
ಉದಲಗುರಿ ಜಿಲ್ಲೆಯ ಭೈರಗುರಿಯಲ್ಲಿ ಗ್ರಾಮ ಸಭೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ (ವಿಸಿಡಿಸಿ) ಸೇವೆ ಸಲ್ಲಿಸುತ್ತಿರುವ ಬಾಸುಮತರಿ, ಯುಪಿಪಿಎಲ್ ಮತ್ತು ಬಿಜೆಪಿ ಎರಡು ಪಕ್ಷಗಳನ್ನು ತೀವ್ರವಾಗಿ ಮುಜುಗರಕ್ಕೀಡು ಮಾಡಿದ್ದಾರೆ.
ಇನ್ನೂ ಇದು ಹಳೆಯ ಫೋಟೋವಾಗಿದ್ದು, ಈ ಫೋಟೋವನ್ನು ಚುನಾವಣೆ ವೇಳೆ ಹರಿಯ ಬಿಡಲಾಗಿದೆ. ರಾಜಕೀಯ ದುರುದ್ದೇಶದಿಂದ ಫೋಟೋ ವೈರಲ್ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth