1:12 PM Saturday 31 - January 2026

ಟೋಲ್ ಗೇಟ್ ಗಳಲ್ಲಿ ಟ್ರಾಫಿಕ್ ‌ಕಡಿಮೆ ಮಾಡಲು ಪ್ಲ್ಯಾನ್: ಕಡಿಮೆ ಬ್ಯಾಲೆನ್ಸ್ ಇದ್ರೆ ಬ್ಲ್ಯಾಕ್ ಲಿಸ್ಟ್ ನಲ್ಲಿ ಸೇರ್ಪಡೆ ಆಗುತ್ತೆ?!

17/02/2025

ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ದೀರ್ಘ ಸರತಿ ಸಾಲು ಕಡಿಮೆ ಮಾಡುವ ಉದ್ದೇಶದಿಂದ ಈ ಹೊಸ ನಿಯಮ ಜಾರಿಗೆ ತರಲಾಗಿದೆ. ಈ ಹೊಸ ನಿಯಮದ ಅಡಿಯಲ್ಲಿ ಕಡಿಮೆ ಬ್ಯಾಲೆನ್ಸ್, ವಿಳಂಬ ಪಾವತಿ, ಕೆವೈಸಿ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಬ್ಲ್ಯಾಕ್ ಲಿಸ್ಟ್​ಗೆ ಸೇರಿಸಲಾಗುತ್ತದೆ. ಹೆಚ್ಚುವರಿ ದಂಡವನ್ನೂ ವಿಧಿಸಲಾಗುತ್ತದೆ.

*ಫಾಸ್ಟ್‌ಟ್ಯಾಗ್‌ನಲ್ಲಿ ಹಣ ಇರಬೇಕು. ಇಲ್ಲದಿದ್ದರೆ ಟೋಲ್ ಪ್ರವೇಶಕ್ಕೆ ಒಂದು ಗಂಟೆ ಮೊದಲು ಹಣ ಜಮೆ ಮಾಡಿರಬೇಕು. ಟೋಲ್ ಹತ್ತಿರ ಬಂದಮೇಲೆ ರಿಚಾರ್ಜ್ ಮಾಡೋಣ ಅಂದರೆ ಸಮಸ್ಯೆಯಾಗಲಿದೆ.

*ಟೋಲ್ ದಾಟುವ 60 ನಿಮಿಷ ಮೊದಲು ಹಾಗೂ ದಾಟಿದ 10 ನಿಮಿಷಗಳ ಕಾಲ ಫಾಸ್ಟ್‌ಟ್ಯಾಗ್‌ ಆಕ್ಟೀವ್ ಇರಬೇಕು. ಒಂದು ವೇಳೆ ಈ ನಿಯಮ ಪಾಲನೆ ಮಾಡದಿದ್ದರೆ, ಟೋಲ್ ಸಿಸ್ಟಮ್‌ನಲ್ಲಿ ಎರರ್ ಕೋಡ್ 176 ಎಂದು ತೋರಿಸಲಾಗುತ್ತದೆ. ಈ ವೇಳೆ ಪ್ರಯಾಣಿಕರು ದುಪ್ಪಟ್ಟು ಹಣ ಪಾವತಿಸಬೇಕಾಗುತ್ತದೆ.

*ಕೆವೈಸಿ ಮಾಡಿಲ್ಲ ಎಂದಾದರೆ ನಿಮ್ಮ ಫಾಸ್ಟ್‌ಟ್ಯಾಗ್‌ ಅನ್ನು ಕಪ್ಟುಪಟ್ಟಿಗೆ ಸೇರಿಸಲಾಗುತ್ತದೆ. ಅಂತಹ ಟ್ಯಾಗ್‌ನೊಂದಿಗೆ ಬರುವ ವಾಹನಕ್ಕೆ ದುಪ್ಪಟ್ಟು ಸುಂಕ ವಿಧಿಸಲಾಗುತ್ತದೆ.
*ಒಂದು ವೇಳೆ ವಾಹನ ಟೋಲ್ ಗೇಟ್ ದಾಟಿದ 15 ನಿಮಿಷಗಳ ನಂತರ ಫಾಸ್ಟ್‌ಟ್ಯಾಗ್‌ ಖಾತೆಯಿಂದ ಹಣ ಕಡಿತವಾದರೆ ಅದಕ್ಕೆ ವಾಹನ ಸವಾರರು ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ.

*ಟೋಲ್‌ಗೇಟ್‌ನಲ್ಲಿ ಹಣ ಕಡಿತ ವಿಳಂಬವಾದರೆ ಅದಕ್ಕೆ ಟೋಲ್ ಆಪರೇಟರ್ ಅನ್ನೇ ಹೊಣೆಯನ್ನಾಗಿ ಮಾಡಲಾಗುತ್ತದೆ. ತಪ್ಪು ಶುಲ್ಕ ಮತ್ತು ಹೆಚ್ಚುವರಿ ಹಣ ಕಡಿತಕ್ಕೆ ಸಂಬಂಧಿಸಿ ಬಳಕೆದಾರರು 15 ದಿನಗಳ ಬಳಿಕವಷ್ಟೇ ದೂರು ಸಲ್ಲಿಸಬಹುದು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version