10:20 AM Saturday 23 - August 2025

ಗಾಜಾ ಪಟ್ಟಣದ ಜನರ ಸ್ಥಿತಿ ಭಯಾನಕ: ನೀರು ಆಹಾರಕ್ಕಾಗಿ ಜನರ ಪರದಾಟ

gaza
13/10/2023

ನವದೆಹಲಿ:  ಇಸ್ರೇಲ್ ಪ್ಯಾಲೆಸ್ಟೀನ್ ನಡುವಿನ ಯುದ್ಧದಿಂದಾಗಿ ಜನರು ಕಂಗೆಟ್ಟಿದ್ದಾರೆ. ಗಾಜಾ ಪಟ್ಟಿಯಲ್ಲಿನ ಜನರ ಸ್ಥಿತಿಯಂತೂ ಹೇಳತೀರದಂತಾಗಿದೆ. ಜನರು ಅನ್ನ– ಆಹಾರ, ನೀರಿಗಾಗಿ ಪರದಾಡುವಂತಾಗಿದೆ.

ಹಮಾಸ್ ಬಂಡುಕೋರರ ವಿರುದ್ಧ ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಡೆಸಿದ ದಾಳಿಯಿಂದಾಗಿ ಈವರೆಗೆ ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 3 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ.

ಗಾಜಾ ಪಟ್ಟಣದ ಜನರ ಸ್ಥಿತಿ ಭಯಾನಕವಾಗಿದೆ. 20 ಲಕ್ಷಕ್ಕೂ ಹೆಚ್ಚು ಜನರು ಇಲ್ಲಿ ಸಿಲುಕಿದ್ದಾರೆ. ಅ.7ರಿಂದ ಗಾಜಾಪಟ್ಟಿಲ್ಲಿ 1,100 ಜನರು ಮೃತಪಟ್ಟಿದ್ದು, 5 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ವಿಶ್ವಸಂಸ್ಥೆಯ 12 ಮಂದಿ ಸಿಬ್ಬಂದಿ ಕೂಡ ಹತ್ಯೆಗೀಡಾಗಿದ್ದಾರೆ.

ಅಪಹರಣಕ್ಕೊಳಗಾಗಿರುವ ಇಸ್ರೇಲಿಗರು ಮನೆಗೆ ಹಿಂದಿರುಗುವವರೆಗೂ ಗಾಜಾ ಪಟ್ಟಣದಲ್ಲಿ ವಿದ್ಯುತ್, ನೀರು ಸರಬರಾಜಾಗುವುದಿಲ್ಲ, ವಾಹನ ನಗರವನ್ನು ಪ್ರವೇಶಿಸುವುದಿಲ್ಲ ಎಂದು ಇಸ್ರೇಲ್ ಎಚ್ಚರಿಕೆ ನೀಡಿದೆ.

ಇತ್ತೀಚಿನ ಸುದ್ದಿ

Exit mobile version