5:15 AM Wednesday 20 - August 2025

‘ಯುವಕರಲ್ಲಿ ದೇಶ ಕಟ್ಟುವ ಶಕ್ತಿ ಇದ್ದರೂ ಕೆಲಸ ಸಿಗುತ್ತಿಲ್ಲ: ಮೋದಿ ಲಕ್ಷ ಮೌಲ್ಯದ ಸೂಟ್ ಧರಿಸ್ತಾರೆ, ನಾನು ಧರಿಸೋದು ಸಾಮಾನ್ಯ ಟೀ ಶರ್ಟ್’ ಎಂದ ರಾಹುಲ್ ಗಾಂಧಿ

11/11/2023

ಮಧ್ಯಪ್ರದೇಶದಲ್ಲಿ ಚುನಾವಣಾ ಅಬ್ಬರ ಜೋರಾಗಿದೆ. ಕೆಲವೇ ದಿನಗಳಲ್ಲಿ ‌ನಡೆಯುವ ಚುನಾವಣಾ ಪ್ರಚಾರದ ರ್ಯಾಲಿಯಲ್ಲಿ ಭಾಗವಹಿಸಿದ್ದ ರಾಹುಲ್‌ ಗಾಂಧಿ ಅವರು ಪ್ರಧಾನಿ ಮೋದಿ ಸೂಟ್‌ಗಳ ಬಗ್ಗೆ ಮಾತನಾಡಿದ್ದಾರೆ.

ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ‘ಮೋದಿ ಸೂಟ್‌ ಲಕ್ಷ ಲಕ್ಷ ಬೆಲೆ ಬಾಳುತ್ತದೆ. ಅವರು ಎಂದಾದರೂ ತಮ್ಮ ಡ್ರೆಸ್‌ನ್ನು ರಿಪೀಟ್‌ ಮಾಡಿದ್ದನ್ನು ನೋಡಿದ್ದೀರಾ..? ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ. ‘ನಾನು ಹಾಕೋದು ಒಂದು ಸೀದಾ ಸಾದಾ ಟೀ ಶರ್ಟ್‌ ಅಷ್ಟೆ’ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ದುಬಾರಿ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

“ಪ್ರಧಾನಿ ಮೋದಿ ಯಾವಾಗಲೂ ತಾನು ಒಬಿಸಿ ಸಮುದಾಯದವನು ಎಂದು ಹೇಳಿಕೊಳ್ಳುತ್ತಾರೆ. ಪದೇ ಪದೇ ಇದನ್ನೇ ಹೇಳಿ ಮೋದಿ ಪ್ರಧಾನಿ ಹುದ್ದೆಗೇರಿದ್ದಾರೆ. ಆದರೆ ಈಗ ಅಧಿಕಾರ ಸಿಕ್ಕ ಮೇಲೆ ಜಾತಿ ವಿಚಾರವೇ ಭಾಷಣದಿಂದ ನಾಪತ್ತೆಯಾಗಿದೆ. ಅದರಲ್ಲೂ ನಾನು ಜಾತಿ ಗಣತಿ ವಿಚಾರ ಶುರು ಮಾಡಿದ ಮೇಲೆ ಭಾರತದಲ್ಲಿ ಜಾತಿಯೇ ಇಲ್ಲ ಎನ್ನುತ್ತಿದ್ದಾರೆ” ಎಂದು ರಾಹುಲ್‌ ಗಾಂಧಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜಾತಿ ಗಣತಿ ಕ್ರಾಂತಿಕಾರಿ ಹೆಜ್ಜೆಯಾಗಿದ್ದು, ಅದು ಭಾರತದ ಜನರ ಜೀವನವನ್ನು ಬದಲಾಯಿಸಲಿದೆ.ವ್ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಧ್ಯಪ್ರದೇಶ ಹಾಗೂ ರಾಷ್ಟ್ರಮಟ್ಟದಲ್ಲಿ ಜಾತಿ ಗಣತಿ ಕೈಗೊಳ್ಳಲಿದೆ ಎಂದು ರಾಹುಲ್‌ ಗಾಂಧಿ ಹೇಳಿದರು.

ಇನ್ನು ಬಿಜೆಪಿಯವರು ನಿರುದ್ಯೋಗ ಸಮಸ್ಯೆ ಕಡಿಮೆ ಆಗುತ್ತಿದೆ ಎನ್ನುತ್ತಿದ್ದಾರೆ. ಆದರೆ ಬಿಜೆಪಿ ಸರ್ಕಾರದಿಂದ ನಿರುದ್ಯೋಗ ಹೆಚ್ಚಾಗಿದೆ. ಭಾರತ ಜೋಡೋ ಯಾತ್ರೆ ಸಮಯದಲ್ಲಿ ನಿರುದ್ಯೋಗ ಸಮಸ್ಯೆಯಿಂದ ನೊಂದ ಸಾಕಷ್ಟು ಯುವಕರನ್ನು ಭೇಟಿಯಾಗಿದ್ದೇನೆ. ಯುವಕರಲ್ಲಿ ದೇಶ ಕಟ್ಟುವ ಶಕ್ತಿ ಇದೆ, ಸಾಮರ್ಥ್ಯನೂ ಇದೆ. ಆದರೆ ಕೆಲಸ ಸಿಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ

Exit mobile version