2:41 AM Wednesday 10 - December 2025

ಶಸ್ತ್ರಾಸ್ತ್ರ ತಪಾಸಣೆಯ ವೇಳೆ ಪೊಲೀಸರ ಮೇಲೆ ಗುಂಡಿನ ದಾಳಿ; ಸಬ್ ಇನ್ಸ್ ಪೆಕ್ಟರ್ ಮೃತ್ಯು

24/02/2021

ಪಾಟ್ನಾ: ಅಕ್ರಮ ಶಸ್ತ್ರಾಸ್ತ್ರದ ತಪಾಸಣೆಗೆ ತೆರಳಿದ್ದ ಪೊಲೀಸ್ ತಂಡದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಘಟನೆ ಬಿಹಾರದ ಸೀತಮರ್ಹಿ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಯಲ್ಲಿ ಓರ್ವ ಸಬ್ ಇನ್ಸ್ ಪೆಕ್ಟರ್ ಸಾವನ್ನಪ್ಪಿ ಹಲವು ಪೊಲೀಸರು ಗಾಯಗೊಂಡಿದ್ದಾರೆ.

ದಿನೇಶ್ ಶಾ ಮೃತಪಟ್ಟ ಸಬ್ ಇನ್ಸ್ ಪೆಕ್ಟರ್ ಆಗಿದ್ದು, ಚೌಕಿದಾರ್ ಲಾಲ್ ಬಾವು ಸೇರಿದಂತೆ  ಇನ್ನಿತರ ಪೊಲೀಸರಿಗೆ ಗಾಯವಾಗಿದೆ. ಅಕ್ರಮ ಮದ್ಯ ಹಾಗೂ ಶಸ್ತ್ರಾಸ್ತ್ರ ಸಾಗಣೆ ಪತ್ತೆ ಮಾಡಲು ಹೋದ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆದಿದೆ.

ಘಟನಾ ಸ್ಥಳಕ್ಕೆ ಸೀತಮರ್ಹಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೌಡಾಯಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version