10:39 AM Saturday 23 - August 2025

ಪೊಲೀಸರು ನನಗೆ ಬೂಟ್ ನಲ್ಲಿ ಹೊಡೆದಿದ್ದಾರೆ | ಅರ್ನಾಬ್ ಗೋಸ್ವಾಮಿ ಆರೋಪ

07/11/2020

ಮುಂಬೈ: ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತನಾಗಿರುವ ಆರೋಪಿ ಅರ್ನಾಬ್ ಗೋಸ್ವಾಮಿ ಮತ್ತೆ ಹೊಸ ಡ್ರಾಮ ಆರಂಭಿಸಿದ್ದು, ಪೊಲೀಸರು ನನಗೆ ಬೂಟ್ ನಲ್ಲಿ ಹೊಡೆದಿದ್ದಾರೆ. ನನ್ನ ಬೆನ್ನು ಮೂಳೆಗೆ ಗಾಯವಾಗಿದೆ ಎಂದು ಆರೋಪಿಸಿದ್ದಾನೆ.

ತಾಯಿ-ಮಗ ಇಬ್ಬರು ಅಮಾಯಕ ಜೀವಗಳ ಬಲಿಗೆ ಪ್ರೇರೇಪಣೆ ನೀಡಿದ ಆರೋಪದಲ್ಲಿ ಬಂಧಿತನಾಗಿರುವ ಅರ್ನಾಬ್ ಗೋಸ್ವಾಮಿ, ಈ ಪ್ರಕರಣದಲ್ಲಿ ಜಾಮೀನು ಕೋರಿ ಶನಿವಾರ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು,  ಈ ವೇಳೆ ನ್ಯಾಯಾಂಗ ಬಂಧನಕ್ಕೊಳಗಾದ ತನ್ನ ಕಕ್ಷಿದಾರನ ಮೇಲೆ ಪೊಲೀಸರು ಕ್ರೌರ್ಯ ಮೆರೆದಿದ್ದಾರೆ, ಅವರು ಕ್ರೂರಿಗಳು ಎಂದು ಅರ್ನಾಬ್ ಪರ ವಕೀಲರು ವಾದಿಸಿದ್ದಾರೆ.

ಇನ್ನೂ ಬಂಧನದ ಅವಧಿಯಲ್ಲಿ, ಪೊಲೀಸ್ ವ್ಯಾನ್‌ನಲ್ಲಿ ಮತ್ತು ಪೊಲೀಸರ ವಶದಲ್ಲಿದ್ದಾಗ, ನನ್ನ  ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಬೆನ್ನುಮೂಳೆಗೆ ಗಂಭೀರವಾದ ಗಾಯವಾಗಿತ್ತು ಮತ್ತು ಒಬ್ಬ ಪೊಲೀಸ್ ಅಧಿಕಾರಿ ನನ್ನ ಮೇಲೆ ಬೂಟ್‌ನಿಂದ ಹೊಡೆದಿದ್ದಾರೆ ಎಂದು ಗೋಸ್ವಾಮಿ ಜಾಮೀನು ಅರ್ಜಿಯಲ್ಲಿ ಆರೋಪಿಸಿದ್ದಾನೆ.

 

ಇತ್ತೀಚಿನ ಸುದ್ದಿ

Exit mobile version