ಇಸ್ರೇಲ್ ಹಿಂಸೆಯ ಮಧ್ಯೆ ಗಾಝಾದಲ್ಲಿ ಪ್ರಥಮ ಹಂತದ ಪೊಲಿಯೋ ಲಸಿಕೆ ಅಭಿಯಾನ

06/09/2024

ಗಾಝಾದಲ್ಲಿ ಪ್ರಥಮ ಹಂತದ ಪೊಲಿಯೋ ಲಸಿಕೆ ಅಭಿಯಾನ ಮುಗಿದಿದೆ. ಪೊಲಿಯೋ ಕಾಯಿಲೆ ಪತ್ತೆಯಾದ ಬಳಿಕ ವಿಶ್ವ ಆರೋಗ್ಯ ಸಂಸ್ಥೆಯು ಪೊಲಿಯೋ ಲಸಿಕೆ ನೀಡುವುದಕ್ಕೆ ಮುಂದಾಗಿದೆ. ಹತ್ತು ವರ್ಷಕ್ಕಿಂತ ಕೆಳಗಿನ ಒಂದು ಲಕ್ಷದ 87,000 ಮಕ್ಕಳಿಗೆ ಪೊಲಿಯೋ ಲಸಿಕೆ ನೀಡಲಾಗಿದೆ ಎಂದು ತಿಳಿಸಲಾಗಿದೆ.

ಎರಡನೇ ಹಂತದ ವ್ಯಾಕ್ಸಿನ್ ಹಾಕುವ ಕಾರ್ಯ ಪ್ರಾರಂಭವಾಗಿದ್ದು 3,40,000 ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ಮೂರನೇ ಹಂತದ ವ್ಯಾಕ್ಸಿನ್ ಹಾಕುವ ಯೋಜನೆಯು ಸೆಪ್ಟೆಂಬರ್ 9 ರಂದು ಆರಂಭವಾಗಲಿದೆ. ಪಶ್ಚಿಮ ಗಾಝಾದಲ್ಲಿ ಒಂದೂವರೆ ಲಕ್ಷ ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕುವ ಗುರಿಯನ್ನು ಮೂರನೇ ಹಂತದಲ್ಲಿ ಇಟ್ಟುಕೊಳ್ಳಲಾಗಿದೆ. ಗಾಝಾದಲ್ಲಿ ಕಳೆದ ತಿಂಗಳು ಹಲವು ಮಕ್ಕಳು ಪೊಲಿಯೋ ಕಾಯಿಲೆಗೆ ತುತ್ತಾದದ್ದು ವರದಿಯಾಗಿತ್ತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version