10:23 AM Saturday 23 - August 2025

ಶಿವಮೊಗ್ಗ ಘಟನೆ: ಗೃಹ ಸಚಿವರಿಂದ ಸೇಡಿನ ರಾಜಕಾರಣ: ಮಾಜಿ ಸಚಿವ ಬಿ. ಶ್ರೀರಾಮುಲು ಗಂಭೀರ ಆರೋಪ

shri ramulu
07/10/2023

ಚಾಮರಾಜನಗರದಲ್ಲಿ ಅಧಿಕಾರಕ್ಕೆ ಬಂದ ಕೇವಲ ನಾಲ್ಕು ತಿಂಗಳಲ್ಲಿ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಕೋರ್ಟ್ ಆದೇಶಕ್ಕೆ ಮೊದಲೇ ಕಾವೇರಿ ನೀರು ಬಿಟ್ಟು ನಮ್ಮ ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ್ದಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿಕೆ ನೀಡಿದರು.

ಚಾಮರಾಜನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು,  ಕಾನೂನು ವ್ಯವಸ್ಥೆ ರಾಜ್ಯದಲ್ಲಿ ಸಂಪೂರ್ಣವಾಗಿ ಹದಗೆಟ್ಟಿದೆ. ಶಿವಮೊಗ್ಗ ಕಲ್ಲು ತೂರಾಟ ಘಟನೆ ಕಾನೂನು ಸುವ್ಯವಸ್ಥೆ ಹಾಳಾಗಿರುವ ಪ್ರತೀಕ. ಒಂದು ಸಮುದಾಯವನ್ನು ಸರ್ಕಾರ ಓಲೈಸುತ್ತಿದೆ. ಎಸ್ಟಿಗಳ ಮೇಲೆ ಹಲ್ಲೆ ಆಗ್ತಿದೆ, ಶಿವಮೊಗ್ಗ ಗಲಭೆಯನ್ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಪೊಲೀಸ್ ತನಿಖೆಯಿಂದ ನಿಷ್ಪಕ್ಷಪಾತ ವರದಿ ಬರಲ್ಲ ಎಂದ ಶ್ರೀರಾಮುಲು, ಕೇವಲ ಪೊಲೀಸ್ ತನಿಖೆಯಿಂದ ನ್ಯಾಯ ಸಿಗಲ್ಲ, ಉನ್ನತ ಮಟ್ಟದ ತನಿಖೆ ಆಗಬೇಕು. ಗೃಹ ಸಚಿವರು ಎಲ್ಲಿದ್ದಾರೆ ಅಂತ ಗೊತ್ತಾಗ್ತಿಲ್ಲ. ಗೃಹ ಸಚಿವರು ಸೇಡಿನ ರಾಜಕಾರಣ ಮಾಡ್ತಿದಾರೆ. ಕೋಮು ಸಂಘರ್ಷ ತಡೆಯುವಲ್ಲಿ ಸರ್ಕಾರ ವಿಫಲ ಆಗಿದೆ ಎಂದರು.

ಒಂದು ಕೋಮನ್ನು ಓಲೈಸಲು ಹೀಗೆಲ್ಲ ಆಗ್ತಿದೆ. ರಾಜ್ಯದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲವಾಗಿದೆ, ಶಿವಮೊಗ್ಗ ಘಟನೆಯ ನೇರ ಹೊಣೆಯನ್ನು ಸಿಎಂ ಹಾಗು ಡಿಸಿಎಂ ಹೊರಬೇಕು ಎಂದರು.

ಎಸ್ಸಿ–ಎಸ್ಸ್ಟಿ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳುತ್ತಿದ್ದಾರೆ. ಎಸ್ಸಿಪಿ, ಟಿಎಸ್ಪಿ ಅನುದಾನ ತಂದಿದ್ದು ತಾವೇ ಅಂತ ಸಿಎಂ ಸಿದ್ದರಾಮಯ್ಯ ಬೊಬ್ಬೆ ಹೊಡೆಯುತ್ತಿದ್ದಾರೆ. ಆದ್ರೆ ಆ ಅನುದಾನ ಎಲ್ಲಿ ಹೋಗ್ತಿದೆ. ಇವರಿಂದಾಗಿ ದಲಿತ ಮಕ್ಕಳಿಗೆ ಸ್ಕಾಲರ್ಶಿಪ್ ಕೋಡೋಕೆ ಆಗ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಲೋಕಸಭೆ ಚುನಾವಣೆ ಹಿನ್ನೆಲೆ ಇಂಡಿಯಾ ಮೈತ್ರಿಕೂಟ ಮಾಡಿಕೊಂಡಿದ್ದಾರೆ. ಅದರ ಭಾಗವಾಗಿ ಡಿಸಿಎಂ ಡಿಕೆಶಿ ತಮಿಳುನಾಡನ್ನ ಸಂತೈಸಲು ನಮ್ಮ ಜನರನ್ನು ಕೊನೆಗಾಣಿಸ್ತಿದ್ದಾರೆ. ಹೀಗಾಗಿ ನಾವು ಮೈತ್ರಿ ಮಾಡಿಕೊಂಡಿದ್ದೇವೆ. ಎಲ್ಲರ ಸಮ್ಮುಖದಲ್ಲಿ ಕೂತು ಮಾತಾಡ್ತಿದ್ದೇವೆ. ಮೈತ್ರಿ ವಿಚಾರ ಇನ್ನು ಮಾತುಕತೆ ಹಂತದಲ್ಲಿ ಇದೆ, ನಮ್ಮ ನಾಯಕರು ಸೂಕ್ತ ನಿರ್ಧಾರ ಕೈಗೊಳ್ತಾರೆ ಎಂದು ಶ್ರೀರಾಮುಲು ತಿಳಿಸಿದರು.

ಇತ್ತೀಚಿನ ಸುದ್ದಿ

Exit mobile version