1:52 PM Saturday 31 - January 2026

ಕೃಷಿ ಮಂತ್ರಿ ಜೊತೆ ಮಾತುಕತೆ ಇಲ್ಲ, ಪ್ರಧಾನಿ, ಗೃಹ ಸಚಿವರು ರೈತರ ಜೊತೆ ಮಾತುಕತೆಗೆ ಬರಲಿ | ರಾಕೇಶ್ ಟಿಕಾಯತ್

04/02/2021

ನವದೆಹಲಿ: ನಾವು ಕೃಷಿ ಮಂತ್ರಿಗಳ ಜೊತೆಗೆ ಚರ್ಚೆಗೆ ಸಿದ್ಧರಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವರು ನಮ್ಮೊಂದಿಗೆ ಮಾತನಾಡಲಿ ಎಂದು ಭಾರತೀಯ ಕಿಸಾನ್ ಯೂನಿಯನ್ ಪ್ರವರ್ತಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಕೃಷಿ ಕಾನೂನು ಸಂಬಂಧ ರೈತರು ಬುಧವಾರ ಹರ್ಯಾಣದ ಜಿಂದ್ ಜಿಲ್ಲೆಯ ಕಂಡೇಲಾ ಗ್ರಾಮದಲ್ಲಿ ಮಹಾಪಂಚಾಯತ್ ಸಭೆಯಲ್ಲಿ ಮಾತನಾಡಿದ ರಾಕೇಶ್ ಈ ವಿಚಾರವನ್ನು ಹೇಳಿದರು.

ಇನ್ನೂ ರೈತರ ಪ್ರತಿಭಟನೆಗೆ ತಡೆಯಾಗಿ  ದೆಹಲಿ ಗಡಿಯಲ್ಲಿ ಮೊಳೆ, ಬ್ಯಾರಿಕೇಡ್ ಗಳಲ್ಲಿ ಮುಳ್ಳು ತಂತಿಯ ಬೇಲಿ ಹಾಕಿರುವುದರ ಬಗ್ಗೆ ಮಾತನಾಡಿದ ಅವರು, ನಾವು ರೈತ ವಿರೋಧಿ ಕಾನೂನನ್ನು ಹಿಂಪಡೆಯಬೇಕು ಎಂದು ಕೇಳುತ್ತಿದ್ದೇವೆ.  ಆದರೆ ರಾಜನಿಗೆ ಭಯವಾದರೆ, ಆತ ತನ್ನ ಕೋಟೆಯ ಬಾಗಿಲನ್ನು ಭದ್ರ ಮಾಡಿಕೊಳ್ಳುತ್ತಾನೆ. ಈಗ ದೆಹಲಿಯಲ್ಲಿ ಇದೇ ನಡೆಯುತ್ತಿರುವುದು ಎಂದು ಹೇಳಿದ್ದಾರೆ. ಶತ್ರುಗಳಿಗೆ ಹೆದರಿಯೂ ಕೂಡ ಯಾರೂ  ಮುಳ್ಳಿನ ಬೇಲಿ ಹಾಕಲಾರರು ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ

Exit mobile version