ಪ್ರಜ್ವಲ್ ರೇವಣ್ಣಗೆ ಜೈಲಿನಲ್ಲಿ ಸಿಕ್ತು ಹೊಸ ಕೆಲಸ: ದಿನಕ್ಕೆ 522 ರೂ. ಸಂಬಳ!

ಬೆಂಗಳೂರು: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದೀಗ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಅವರನ್ನ ಸಾಮಾನ್ಯ ಖೈದಿಯಂತೆ ನಡೆಸಿಕೊಳ್ಳಲಾಗುತ್ತಿದೆ, ಅವರಿಗೆ ಇದೀಗ ಜೈಲಿನಲ್ಲಿ ಹೊಸ ಕೆಲಸವೂ ಸಿಕ್ಕಿದೆಯಂತೆ. ಹೀಗಂತ ವರದಿಯೊಂದು ತಿಳಿಸಿದೆ.
ಪ್ರಜ್ವಲ್ ರೇವಣ್ಣಗೆ ಜೈಲಿನಲ್ಲಿ ಶಿಕ್ಷೆ ಆರಂಭವಾಗಿದೆ, ಎಲ್ಲ ಖೈದಿಗಳಿಗೆ ಜೈಲಿನಲ್ಲಿ ವಿವಿಧ ಕೆಲಸಗಳನ್ನು ನೀಡುವಂತೆಯೇ ಪ್ರಜ್ವಲ್ ರೇವಣ್ಣಗೂ ಜೈಲಿನಲ್ಲಿ ಕೆಲಸ ಸಿಕ್ಕಿದೆ. ಪ್ರಜ್ವಲ್ ರೇವಣ್ಣ ಅವರಿಗೆ ಜೈಲಿನಲ್ಲಿ ಕ್ಲರ್ಕ್ ಕೆಲಸ ಸಿಕ್ಕಿದೆಯಂತೆ, ಈ ಕೆಲಸಕ್ಕೆ ದಿನಗೂಲಿ ಕೂಡ ನಿಗದಿಯಾಗಿದ್ದು, ದಿನಕ್ಕೆ 522 ರೂಪಾಯಿ ಕೂಲಿ ನಿಗದಿಪಡಿಸಲಾಗಿದೆ.
ಕೆಲಸ ಮಾಡಿದ ದಿನ ಮಾತ್ರವೇ ಅವರಿಗೆ 522 ರೂಪಾಯಿ ಸಂಬಳ ಸಿಗಲಿದೆ. ಅನಾರೋಗ್ಯ, ಇನ್ನಿತರ ಸಮಸ್ಯೆಗಳಿಂದ ಕೆಲಸಕ್ಕೆ ಹಾಜರಾಗದ ದಿನ ಈ ಕೂಲಿ ಇರುವುದಿಲ್ಲ ಪ್ರತಿ ತಿಂಗಳು 12 ದಿನ ಜೈಲಿನಲ್ಲಿ ಕೆಲಸ ಮಾಡಬೇಕು.
ನನಗೆ ಕೃಷಿ ಇಲ್ಲವೇ ಆಡಳಿತಕ್ಕೆ ಸಂಬಂಧಿಸಿದ ಯಾವುದಾದರೂ ಕೆಲಸ ಕೊಡಿ ಅಂತ ಪ್ರಜ್ವಲ್ ರೇವಣ್ಣ ಜೈಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಹೀಗಾಗಿ ಅವರಿಗೆ ಈ ಕೆಲಸ ಸಿಕ್ಕಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಸಿಕ್ಕರೂ ಕೂಡ ಇನ್ನುಳಿದ ಕೇಸುಗಳ ವಿಚಾರಣೆ ನಡೆಯುತ್ತಿದ್ದು ಹೀಗಾಗಿ ಅವರಿಗೆ ಪೂರ್ಣ ಪ್ರಮಾಣದಲ್ಲದೇ “ಅರೆ ಕಾಲಿಕ” ಗುಮಾಸ್ತ ಕೆಲಸ ನಿಗದಿಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD