ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ದರೆ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದರೇನೋ: ಭವ್ಯ ನರಸಿಂಹಮೂರ್ತಿ ಆಕ್ರೋಶ

bhavya narasimhamurthy
28/04/2024

ಬೆಂಗಳೂರು: ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ದರೆ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದರೇನೋ ಎಂದು ಎಐಸಿಸಿ ವಕ್ತಾರೆ ಭವ್ಯ ನರಸಿಂಹಮೂರ್ತಿ ಹೇಳಿದ್ದಾರೆ.

ಹಾಸನದಲ್ಲಿ ಅಶ್ಲೀಲ ವಿಡಿಯೋ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು, ಇಲ್ಲಿ ಕುಳಿತಿರೋರು ನಾವೆಲ್ಲರೂ ಹೆಣ್ಣು. ನಮಗೆ ಹೆಣ್ಣು ಅಂತ ಬಂದಾಗ ನಮಗೆ ಯಾವುದೇ ಜಾತಿ, ಕುಲ ಬರಲ್ಲ. ಇಂದು ನಾವು ಹೆಣ್ಣು ಮಕ್ಕಳ ಮೇಲೆ ಮತ್ತು ಲಿಂಗಾಧರಿತವಾಗಿ ಆಗುತ್ತಿರುವ ದೌರ್ಜನ್ಯದ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಆ ಹೆಣ್ಮಕ್ಕಳು ಹಿಂದೂ ಆಗಿರಲಿ ಅಥವಾ ಮುಸ್ಲಿಂ ಆಗಿರಲಿ ಅದರ ಬಗ್ಗೆ ಬೇಧ ಇಲ್ಲ. ಇಂತಹ ಲೈಂಗಿಕ ಪೀಡಕರು ಕ್ರಿಮಿನಲ್​ಗಳು ಎಂದು ಎಐಸಿಸಿ ವಕ್ತಾರೆ ಭವ್ಯ ನರಸಿಂಹಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬರು ನೇಹಾ ಹಿರೇಮಠ್ ಪ್ರಕರಣವನ್ನು ಖಂಡಿಸಿದ್ದಾರೆ. ಇದೀಗ ಆ ಪ್ರಕರಣದ ತನಿಖೆಯೂ ನಡೆಯುತ್ತಿದೆ. ನೇಹಾ ಪ್ರಕರಣ ಎಷ್ಟು ಕ್ರೌರ್ಯವಾಗಿತ್ತೋ, ರುಕ್ಸನಾ ಮೇಲೆ ಆಗಿದ್ದು ಅಷ್ಟೆ ಕ್ರೌರ್ಯವಾಗಿತ್ತು. ಆದರೆ ಬಿಜೆಪಿ ಈ ರೀತಿ ಎಂದಿಗೂ ನಡೆದುಕೊಳ್ಳಲ್ಲ ಎಂದು ಹೇಳಿದರು.

ಸಂಸದ ಪ್ರಜ್ವಲ್ ರೇವಣ್ಣ ಮಾಡಿರೋ ಕೃತ್ಯ ಭಾರತದ ಇತಿಹಾಸದಲ್ಲಿಯೇ ಯಾವ ಜನಪ್ರತಿನಿಧಿಯೂ ಮಾಡಿಲ್ಲ. ಯಾರೂ ಸಹ ಇಷ್ಟು ಅಧಿಕಾರದ ದರ್ಪ ಸಹ ತೋರಿಸಿಲ್ಲ  ಎಂದು ಅವರು ಹೇಳಿದರಲ್ಲದೇ ದೌರ್ಜನ್ಯಕ್ಕೆ ಒಳಗಾಗಿರುವ ಸಾವಿರಾರು ಹೆಣ್ಮಕ್ಕಳು ಧ್ವನಿ ಇಲ್ಲದವರು. ಇಂದು ನಾವೆಲ್ಲರೂ ಮಾತನಾಡಿದ್ರೆ ಮಾಧ್ಯಮಗಳು ಕೇಳಿಸಿಕೊಳ್ಳುತ್ತವೆ ಎಂದು ಸಂತ್ರಸ್ತೆಯರ ಧ್ವನಿಯಾಗಿ ಸುದ್ದಿಗೋಷ್ಠಿ ನಡೆಸುತ್ತಿದ್ದೇವೆ ಎಂದರು.

ಯಾವುದೇ ರಾಜಕಾರಣಿ ಅಥವಾ ಪ್ರಭಾವಿ ವ್ಯಕ್ತಿಯಾಗಿರಬಹುದು, ಕರ್ನಾಟಕ, ಭಾರತದ ಮಹಿಳೆಯರ ಬಗ್ಗೆ ಕೆಟ್ಟದಾಗಿ ಕನಸಿನಲ್ಲಿಯೂ ಕಾಣಬಾರದು. ಹಾಗಾಗಿ ಎಲ್ಲ ಮಾಧ್ಯಮಗಳ ಸಹಕಾರ ನಮಗೆ ಬೇಕು ಎಂದು ಭವ್ಯ ನರಸಿಂಹಮೂರ್ತಿ  ಕೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version