5:37 AM Wednesday 20 - August 2025

ಡೀಸೆಲ್ ದರ ಏರಿಕೆ ಬೆನ್ನಲ್ಲೇ ಖಾಸಗಿ ಬಸ್ ಗಳ ಪ್ರಯಾಣದ ದರ ಏರಿಕೆ!

private bus
09/04/2025

ಬೆಂಗಳೂರು: ಡೀಸೆಲ್ ದರ ಏರಿಕೆ ಬೆನ್ನಲ್ಲೇ ಖಾಸಗಿ ಬಸ್ ಗಳ ಪ್ರಯಾಣ ದರದಲ್ಲಿ ಏರಿಕೆಯಾಗಿದೆ. ಪ್ರತಿ ಸ್ಟೇಜ್‌ಗೂ 2 ರೂ.ನಂತೆ 15%ರಷ್ಟು ದರ ಏರಿಕೆ ಮಾಡಲು ಬೆಂಗಳೂರಿನಲ್ಲಿ ಖಾಸಗಿ ಬಸ್ ಮಾಲಿಕರು ಮುಂದಾಗಿದ್ದಾರೆ.

ಎಸಿ, ನಾನ್‌ಎಸಿ, ಸ್ಲೀಪರ್ ಬಸ್‌ ಗಳಲ್ಲಿ ದರ ಏರಿಕೆಯಾಗಲಿದೆ. ಈಗಾಗಲೇ ಡೀಸೆಲ್ ದರ, ಬಿಡಿ ಭಾಗಗಳ ದರ, ಟೈರ್ ದರಗಳ ಹೆಚ್ಚಳ ಸೇರಿದಂತೆ ಎಲ್ಲಾ ದರ ಏರಿಕೆ ಕಾರಣ ದರ ಏರಿಕೆ ಅನಿವಾರ್ಯ ಎಂದು ಬಸ್ ಮಾಲಿಕರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯಾದ್ಯಂತ ಒಟ್ಟು 14,000 ಖಾಸಗಿ ಬಸ್‌ ಗಳು ನಿತ್ಯ ಓಡಾಟ ಮಾಡುತ್ತಿವೆ. ಬೆಂಗಳೂರಿನಲ್ಲೇ ಎರಡೂವರೆ ಸಾವಿರ ವಾಹನ ಓಡಾಟ ಮಾಡುತ್ತಿವೆ.  ಒಂದೆಡೆ ಸರ್ಕಾರದ ಬೆಲೆ ಏರಿಕೆ ಇನ್ನೊಂದೆಡೆ ಖಾಸಗಿ ಸಂಸ್ಥೆಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ.

ಹಾಲಿನ ದರ ಏರಿಕೆ ಆಗ್ತಿದ್ದಂತೆಯೇ ಹೊಟೇಲ್ ಗಳಲ್ಲಿ ಚಹಾ, ಕಾಫಿಗಳ ದರ ಏರಿಕೆಯಾಯ್ತು, ಡೀಸೆಲ್ ದರ ಏರಿಕೆಯಾದಾಗ ಪ್ರಯಾಣ ದರ ಏರಿಕೆಯಾಯ್ತು, ಇದೀಗ ಕೇಂದ್ರ ಸರ್ಕಾರ ಗ್ಯಾಸ್ ಬೆಲೆ ಕೂಡ 50 ರೂ. ಏರಿಕೆ ಮಾಡಿದೆ. ಈ ವರ್ಷ ದರ ಏರಿಕೆಯ ಪರ್ವವೇ ಆರಂಭಗೊಂಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ದರ ಏರಿಕೆ ಜನ ಸಾಮಾನ್ಯರನ್ನು ಚಿಂತೆಗೀಡು ಮಾಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version