ಮೋದಿಯವರ ‘ಮಂಗಳಸೂತ್ರ’ ಹೇಳಿಕೆಗೆ ತಿರುಗೇಟು ನೀಡಿದ ಪ್ರಿಯಾಂಕಾ ಗಾಂಧಿ

24/04/2024

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಧಾನಿ ನರೇಂದ್ರ ಮೋದಿಯವರ ‘ಮಂಗಳಸೂತ್ರ’ ಹೇಳಿಕೆಗೆ ತಿರುಗೇಟು ನೀಡಿದ್ದು, ತಮ್ಮ ಕುಟುಂಬದ ಮಹಿಳೆಯರು ದೇಶಕ್ಕಾಗಿ ಹೇಗೆ ತ್ಯಾಗ ಮಾಡಿದ್ದಾರೆ ಎಂಬುದನ್ನು ವಿವರಿಸಿ ಎದಿರೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, “ಕಳೆದ ಎರಡು ದಿನಗಳಿಂದ ಕಾಂಗ್ರೆಸ್ ನಿಮ್ಮ ಮಂಗಳಸೂತ್ರ ಮತ್ತು ಚಿನ್ನವನ್ನು ಕಸಿದುಕೊಳ್ಳಲು ಬಯಸಿದೆ ಎಂದು ಹೇಳಲಾಗುತ್ತಿದೆ. ದೇಶವು 70 ವರ್ಷಗಳಿಂದ ಸ್ವತಂತ್ರವಾಗಿದೆ ಮತ್ತು 55 ವರ್ಷಗಳಿಂದ ಕಾಂಗ್ರೆಸ್ ಸರ್ಕಾರವಿದೆ. ನಿಮ್ಮ ‘ಮಂಗಳಸೂತ್ರ’ದ ಚಿನ್ನವನ್ನು ಯಾರಾದರೂ ಕಸಿದುಕೊಂಡಿದ್ದಾರೆಯೇ.? ಎಂದು ಮೋದಿ ಹೇಳಿದ್ದರು.

ಯುದ್ಧದ ಸಮಯದಲ್ಲಿ, ಇಂದಿರಾ ಗಾಂಧಿ ತನ್ನ ಚಿನ್ನವನ್ನು ದೇಶಕ್ಕೆ ನೀಡಿದ್ದರು. ಮೇರಿ ಮಾ ಕಾ ‘ಮಂಗಳಸೂತ್ರ’ ದೇಶ್ ಕೋ ಕುರ್ಬಾನ್ ಹುವಾ ಹೈ (ನನ್ನ ತಾಯಿಯ ಮಂಗಳಸೂತ್ರವನ್ನು ದೇಶಕ್ಕಾಗಿ ತ್ಯಾಗ ಮಾಡಲಾಯಿತು)… ಸತ್ಯವೆಂದರೆ ಈ (ಬಿಜೆಪಿ) ಜನರಿಗೆ ಮಹಿಳೆಯರ ಹೋರಾಟವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದು ಅವರು ತಿರುಗೇಟು ನೀಡಿದರು.

1991 ರಲ್ಲಿ ಶ್ರೀಲಂಕಾದ ತಮಿಳು ಉಗ್ರಗಾಮಿಗಳಿಂದ ಹತ್ಯೆಯಾದ ತಮ್ಮ ತಂದೆ ರಾಜೀವ್ ಗಾಂಧಿ ಅವರ ಹತ್ಯೆಯನ್ನು ಇದೇ ವೇಳೆ ಪ್ರಿಯಾಂಕಾ ಉಲ್ಲೇಖಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version