12:08 AM Thursday 18 - December 2025

ಮಣಿಪಾಲ ವಸತಿ ಸಮುಚ್ಛಯದಲ್ಲಿ ವೇಶ್ಯಾವಾಟಿಕೆ ದಂಧೆ: ಮೂವರ ಬಂಧನ

arrest
27/11/2023

ಉಡುಪಿ: ಮಣಿಪಾಲದ ವಸತಿ ಸಮುಚ್ಛಯವೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆಗೆ ದಂಧೆಗೆ ನ.26ರಂದು ದಾಳಿ ನಡೆಸಿದ ಉಡುಪಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಗಣೇಶ್, ಸುಧೀರ್ ಮತ್ತು ಮಾರುತಿ ಬಂಧಿತ ಆರೋಪಿಗಳು. ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿಯ ಉನ್ನತ ರೆಸಿಡೆನ್ಸಿಯ ಎರಡು ಪ್ಲಾಟ್ಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿಯಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕ ಜಯಾನಂದ ಕೆ. ದಾಳಿ ನಡೆಸಿ, ದಂಧೆ ನಡೆಸುತ್ತಿದ್ದ ಮೂವರನ್ನು ಬಂಧಿಸಿ, ಇಬ್ಬರು ಸಂತ್ರಸ್ಥ ಮಹಿಳೆ ಯರನ್ನು ರಕ್ಷಿಸಿದ್ದಾರೆ.

ಪ್ರಕರಣದ ಆರೋಪಿಗಳು ಜಗದೀಶ ಯಾನೆ ಜಗ್ಗ ಎಂಬಾತನ ಜೊತೆ ಸೇರಿ ವೇಶ್ಯಾವಾಟಿಕೆ ದಂಧೆ ನಡೆಸಿ ಅಕ್ರಮ ಲಾಭ ಪಡೆಯುತ್ತಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

Exit mobile version