8:48 PM Wednesday 22 - October 2025

ಮತ್ತೆ ಕಾಮನ್ ಮ್ಯಾನ್ ಆದ ರಾಹುಲ್ ಗಾಂಧಿ: ಬಿಎಂಟಿಸಿಯಲ್ಲಿ ಪ್ರಯಾಣ

rahul gandhi
08/05/2023

ಬೆಂಗಳೂರು: ಫುಡ್ ಡೆಲಿವೇರಿ ಬಾಯದ ಜೊತೆ ಬೆಂಗಳೂರಿನಲ್ಲಿ ತಂಗಿದ್ದ ಹೊಟೇಲ್‌ ವರೆಗೆ ಡ್ರಾಪ್ ತೆಗೆದುಕೊಂಡು ಕಾಮನ್ ಮ್ಯಾನ್ ಆಗಿದ್ದ ಕಾಂಗ್ರೆಸ್  ಮುಖಂಡ ರಾಹುಲ್ ಗಾಂಧಿ ಇದೀಗ ಬೆಂಗಳೂರಿನ ಬಿಎಂಟಿಸಿ ಬಸ್‍ ನಲ್ಲಿ ಸಾಮಾನ್ಯ ನಾಗರಿಕರಂತೆ ಸೋಮವಾರ ಸಂಚರಿಸಿ ಮತ್ತೆ ತಾವೊಬ್ಬ ಸಾಮಾನ್ಯ ಪ್ರಜೆ ಎಂಬುದನ್ನು ತೋರಿಸಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ 2 ದಿನಗಳು ಬಾಕಿಯಿದ್ದು, ಇಂದು ಸಂಜೆ ಚುನಾವನಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ವಿವಿಧ ಪಕ್ಷದ ನಾಯಕರು ಗೆಲುವು ಸಾಧಿಸಲು ವಿವಿಧ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಈ ಮಧ್ಯೆ ಸೋಮವಾರ ಬೆಳಗ್ಗೆ ರಾಹುಲ್ ಗಾಂಧಿ ಅವರು ಬಿಎಂಟಿಸಿ ಬಸ್‍ನಲ್ಲಿ ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಡೆಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕನ್ನಿಂಗ್ ಹ್ಯಾಮ್ ರಸ್ತೆಯಿಂದ ರಾಮಮೂರ್ತಿ ನಗರ ಕಡೆ ಹೋಗುತ್ತಿದ್ದ ಬಸ್‌ ನಲ್ಲಿ ರಾಹುಲ್ ಗಾಂಧಿ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಪ್ರಯಾಣಿಕರ ಜೊತೆ ಸಂವಾದ ನಡೆಸುತ್ತಲೇ ಸಾರ್ವಜನಿಕರಂತೆ ಬಸ್‍ ನಲ್ಲಿ ಪ್ರಯಾಣಿಸಿದರು. ಸುಮಾರು 6 ಕಿ.ಮೀ.ಗೂ ಹೆಚ್ಚು ದೂರ ಬಸ್‍ನಲ್ಲೇ ಪ್ರಯಾಣ ಬೆಳೆಸಿದ್ದಾರೆ.

ಭಾನುವಾರ ರಾಹುಲ್ ಗಾಂಧಿ ಅವರು ಫುಡ್ ಡೆಲಿವರಿ ಬಾಯ್ ಜೊತೆ ದ್ವಿಚಕ್ರ ವಾಹನದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರಿಸಿದ್ದರು. ಅದಾದ ಬಳಿಕ ಡೆಲಿವರಿ ಬಾಯ್‌ ಜೊತೆ ಹೋಟೆಲ್‌ವೊಂದರಲ್ಲಿ ಸಂವಾದ ನಡೆಸಿ, ಅವರಿಗಾಗುವ ತೊಂದರೆಗಳ ಕುರಿತು ಚರ್ಚೆ ನಡೆಸಿದ್ದರು.

rahul gandhi

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version